ಮೊದಲು ನೌಕರಿಯಲ್ಲಿದ್ದ ಪತ್ನಿ ವಿಚ್ಛೇಧನದ ಬಳಿಕ ಸುಮ್ಮನೆ ಕೂತು ಕುಟುಂಬ ನಿರ್ವಹಣೆಯ ಸಂಪೂರ್ಣ ಮೊತ್ತವನ್ನು ವಿಚ್ಛೇದಿತ ಗಂಡನಿಂದ ಕೇಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಹೈಕೋರ್ಟ್ನ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚ್ಛೇದಿತ ಪತ್ನಿಗೆ ಗಂಡನಿಂದ ಸಿಗುವ ಮಾಸಿಕ ನಿರ್ವಹಣೆಯ ಮೊತ್ತವನ್ನು 10 ಸಾವಿರ ರೂಪಾಯಿಯಿಂದ 5 ಸಾವಿರ ರೂಪಾಯಿಗೆ ಇಳಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಪರಿಹಾರದ ಮೊತ್ತವನ್ನು 3 ಲಕ್ಷ ರೂಪಾಯಿಯಿಂದ 2 ಲಕ್ಷ ರೂಪಾಯಿಗೆ ಕಡಿತಗೊಳಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಆ ಮಹಿಳೆ ಕರ್ನಾಟಕ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಆಕೆ ಮದುವೆಗೂ ಮೊದಲು ನೌಕರಿಯಲ್ಲಿದ್ದ ಅಂಶವನ್ನು ಪರಿಗಣಿಸಿ ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್
ಆಕೆ ಸುಮ್ಮನೆ ಕೂತು ಸಂಪೂರ್ಣ ನಿರ್ವಹಣೆಯ ವೆಚ್ಚವನ್ನು ಗಂಡನಿಂದ ಕೇಳುವಂತಿಲ್ಲ ಮತ್ತು ಆಕೆ ತನ್ನ ಜೀವನನಿರ್ವಹಣೆಗಾಗಿ ಪ್ರಯತ್ನ ಪಡಬೇಕು ಮತ್ತು ತನ್ನ ಗಂಡನಿಂದ ಕೇವಲ ಬೆಂಬಲಾತ್ಮಕವಾಗಿ ನಿರ್ವಹಣಾ ವೆಚ್ಚವನ್ನು ಕೇಳಬಹುದು
ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಕೇವಲ ಪತ್ನಿಯ ನಿರ್ವಹಣಾ ವೆಚ್ಚವನ್ನಷ್ಟೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಡಿತಗೊಳಿಸಿದ್ದು, ಮಗುವಿನದ್ದಲ್ಲ. ಅಲ್ಲದೇ ಆಕೆ ತನ್ನ ಅತ್ತೆ ಮತ್ತು ನಾದಿನಿಯ ಜೊತೆಗೆ ಇರಲು ಒಪ್ಪಿಕೊಂಡಿಲ್ಲ ಹಾಗೂ ಪ್ರಾವಿಜನ್ ಸ್ಟೋರ್ ನಡೆಸುತ್ತಿರುವ ಗಂಡ ತನ್ನ ತಾಯಿ ಮತ್ತು ಅವಿವಾಹಿತ ಸಹೋದರಿಯನ್ನೂ ನೋಡಿಕೊಳ್ಳಬೇಕಾಗಿದೆ
ಎಂಬ ಅಂಶವನ್ನೂ ಹೈಕೋರ್ಟ್ ಆದೇಶದಲ್ಲಿ ಪರಿಗಣಿಸಿದೆ.
ADVERTISEMENT
ADVERTISEMENT