ADVERTISEMENT
ವಾಹನ ಸವಾರರಿಗೆ ದಂಡ ಪಾವತಿಯಲ್ಲಿ ಶೇಕಡಾ 50ರಷ್ಟು ವಿನಾಯಿತಿ ಘೋಷಿಸಿ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 9ರೊಳಗೆ ದಂಡ ಪಾವತಿಸುವವರಿಗೆ ಶೇಕಡಾ 50ರಷ್ಟು ರಿಯಾಯಿತಿ ಸಿಗಲಿದೆ.
ಫೆಬ್ರವರಿ 11ರವರೆಗೆ ದಾಖಲಾದ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯಿಸಲಿದೆ.
ಜೂನ್ 14ರಂದು ನಡೆದಿದ್ದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಭೆಯಲ್ಲಿ ದಂಡ ವಿನಾಯಿತಿ ನೀಡುವಂತೆ ಸಾರಿಗೆ ಇಲಾಖೆಗೆ ಸಲಹೆ ನೀಡಲಾಗಿತ್ತು.
ಈ ಸಲಹೆಯನ್ನು ಪರಿಗಣಿಸಿ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ಪಾವತಿಯಲ್ಲಿ ಶೇಕಡಾ 50ರಷ್ಟು ರಿಯಾಯಿತಿ ನೀಡಿ ಆದೇಶಿಸಲಾಗಿದೆ.
ADVERTISEMENT