ADVERTISEMENT
ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತೂ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ರಾಜ್ಯದಲ್ಲಿ ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬೆಳಗ್ಗೆ 7 ಗಂಟೆಯವರೆಗೆ ಅತ್ಯಧಿಕ ಮಳೆಯಾಗಿದೆ.
ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ
ಮಣಿಪುರ- 302 ಮಿಲಿ ಮೀಟರ್, ಕಾಂತಾವರ- 301 ಮಿಲಿ ಮೀಟರ್, ಮುದರಂಗಡಿ-295.5 ಮಿಲಿ ಮೀಟರ್, ಅರ್ತಾಡಿ-279.5 ಮಿಲಿ ಮೀಟರ್ ಮತ್ತು ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 279 ಮಿಲಿ ಮೀಟರ್ನಷ್ಟು ಮಳೆಯಾಗಿದೆ.
ಇವತ್ತು ಮಳೆಯಬ್ಬರ:
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ರಾಜ್ಯದಲ್ಲಿ ಅತ್ಯಧಿಕ ಮಳೆ ಆಗಬಹುದು ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ಪ್ರಾಧಿಕಾರ ಮುನ್ಸೂಚನೆ ನೀಡಿದೆ.
ಆಲೂರು-240 ಮಿಲಿ ಮೀಟರ್, ಚಿತ್ತೂರು – 223 ಮಿಲಿ ಮೀಟರ್, ನಡ – 221 ಮಿಲಿ ಮೀಟರ್, ಮರವಂತೆ – 221 ಮಿಲಿ ಮೀಟರ್ ಮತ್ತು ಕಿರಿ ಮಂಜೇಶ್ವರದಲ್ಲಿ 208 ಮಿಲಿ ಮೀಟರ್ ಮಳೆ ಆಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ.
ADVERTISEMENT