ADVERTISEMENT
ಬಕ್ರೀದ್ ಹಬ್ಬದ ದಿನ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರ ಸಂಬಂಧ ಬಿಜೆಪಿ ಶಾಸಕ ಒಳಗೊಂಡಂತೆ 9 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಬಿಜೆಪಿ ಶಾಸಕ ಶರಣು ಸಲಗಾರ್ ಮೊದಲನೇ ಆರೋಪಿಯಾಗಿದ್ದಾರೆ.
ಐಪಿಸಿ ಕಲಂ 143, 147,448,504,506 ಮತ್ತು 295ರ ಅಡಿಯಲ್ಲಿ ದೂರು ದಾಖಲಾಗಿದೆ.
ಬಕ್ರೀದ್ ದಿನದಂದು ಮನೆಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೇ ಧರ್ಮದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ ಎಂದು ಹೀರೇಮಠ್ ಕಾಲೋನಿನ ಮೆಹ್ರಾಜ್ ಅವರು ದೂರು ನೀಡಿದ್ದರು.
ಬಕ್ರೀದ್ ಹಿನ್ನೆಲೆಯಲ್ಲಿ ಗೋಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ 10 ಜನರೊಂದಿಗೆ ಬಂದು ಬಿಜೆಪಿ ಶಾಸಕ ಶರಣು ಸಲಗಾರ್ ಗಲಾಟೆ ಮಾಡಿದ್ದರು.
ADVERTISEMENT