ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್ ಮುಂತಾದ ಆನ್ಲೈನ್ ಡೆಲಿವರಿ ಕಂಪನಿಗಳಿಗಳಲ್ಲಿ ಕೆಲಸ ಮಾಡುತ್ತಿರುವ ಗಿಗ್ ಕಾರ್ಮಿಕರಿಗೆ ವಿಮೆ ಘೋಷಿಸಿದೆ.
ಒಟ್ಟು 4 ಲಕ್ಷ ರೂಪಾಯಿ ಮೊತ್ತದ ವಿಮೆ ಘೋಷಿಸಲಾಗಿದೆ.
ಈ ವಿಮೆಯಲ್ಲಿ 2 ಲಕ್ಷ ರೂಪಾಯಿ ಮೊತ್ತದ ಜೀವವಿಮೆ ಮತ್ತು 2 ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮೆ ಒಳಗೊಂಡಿದೆ.
ಈ ಎರಡೂ ವಿಮೆಗಳ ಮೊತ್ತದ ಸಂಪೂರ್ಣ ಕಂತನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಆಯವ್ಯಯದಲ್ಲಿ ಘೋಷಿಸಿದ್ದಾರೆ.
ADVERTISEMENT
ADVERTISEMENT