ಸಿಂಹ, ಚಿರತೆ, ಹುಲಿ, ಆನೆ.. ಸಖತ್ ಡೇಂಜರ್.. ಆದರೆ ಜುರಾಸಿಕ್ ಪಾರ್ಕ್ನಲ್ಲಿ ಅಲ್ಲ.. ಏಕೆಂದರೇ.. ಆ ಪಾರ್ಕ್ನಲ್ಲಿ…
ಹೀಗೆಂದು ಟೀನೂ ಆನಂದ್ (Tinu Anand) ಅವರ ಡೈಲಾಗ್ನೊಂದಿಗೆ ರಿಲೀಸ್ ಆದ ಸಲಾರ್ ಪಾರ್ಟ್-1 ಸೀಸ್ಫೈರ್ (Salaar Part-1 CeasFire) ಟೀಸರ್ ಸಿನಿಪ್ರಿಯರನ್ನು ದೊಡ್ಡಮಟ್ಟದಲ್ಲಿಯೇ ಸೆಳೆದಿದೆ.
1.46 ನಿಮಿಷದ ಈ ವಿಡಿಯೋ ಇದೀಗ 100 ಮಿಲಿಯನ್ ವೀವ್ಸ್(100 million views)ನೊಂದಿಗೆ ಯೂಟ್ಯೂಬ್ ಪ್ರಪಂಚವನ್ನು ಶೇಕ್ ಮಾಡಿದೆ.
ಈ ಅದ್ಭುತ ರೆಸ್ಪಾನ್ಸ್ನಿಂದ ಖುಷಿಯಾಗಿರುವ ಹೊಂಬಾಳೆ ಫಿಲಂಸ್ (Hombale Films) ಇದೀಗ ಸಲಾರ್ ಟ್ರೈಲರ್ ಕುರಿತಾಗಿ ಪ್ರಕಟಣೆಯೊಂದನ್ನು ರಿಲೀಸ್ ಮಾಡಿದೆ.
ಭಾರತೀಯ ಸಿನಿ ವೈಭವವನ್ನು ಸಾರಿ ಹೇಳುವಂತೆ ಸಲಾರ್ ಟ್ರೈಲರ್ (Salaar Trailer) ಇರಲಿದೆ ಎಂದು ಹೊಂಬಾಳೆ ಫಿಲಂಸ್ ಭರವಸೆ ನೀಡಿದೆ.
ಹೃದಯ ತುಂಬಿದ ಧನ್ಯವಾದಗಳು
ತಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹಕ್ಕೆ ನಾವು ಅಭಾರಿ.. ಭಾರತೀಯ ಸಿನಿಮಾ ಸಾಮರ್ಥ್ಯದ ಸಂಕೇತವಾಗಿ ಹೊರಹೊಮ್ಮಿರುವ ಸಲಾರ್ ಕ್ರಾಂತಿಗೆ ಚಿತ್ರಪ್ರೇಮಿಗಳಿಂದ ಸಿಕ್ಕಿದ ಪ್ರೀತಿಪೂರ್ವಕ ಬೆಂಬಲದಿಂದ ನಮ್ಮ ಮನತುಂಬಿದೆ.
ಭಾರತೀಯ ಚಿತ್ರ ಸಲಾರ್ ಟೀಸರ್ 10 ಕೋಟಿ ಚಿತ್ರರಸಿಕರನ್ನು ತಲುಪಿ, ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದಿದೆ.ನಿಮ್ಮ ಅಭಿಮಾನದ ಬೆಂಬಲಕ್ಕೆ ನಾವು ಸದಾಋಣಿಗಳು.
ನಿಮ್ಮ ಅಚಲ ಬೆಂಬಲ ನಮ್ಮ ಆಸಕ್ತಿಗೆ ಚೈತನ್ಯ ತುಂಬಿ ಅಸಾಧಾರಣವಾದುದದನ್ನು ಪ್ರೇಕ್ಷಕರ ಮುಂದಿಡಲು ಪ್ರೇರೇಪಿಸುತ್ತದೆ.
ಭಾರತೀಯ ಸಿನಿಮಾ ಭವ್ಯತೆಯನ್ನು ಸಾರಲಿರುವ ಅತ್ಯಂತ ನಿರೀಕ್ಷಿತ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಲು ನಾವೆಲ್ಲಾ ಸಿದ್ದರಾಗುತ್ತಿದ್ದೇವೆ.
ಆಗಸ್ಟ್ ಕೊನೆಯಲ್ಲಿ ಬಿಡುವು ಮಾಡಿಕೊಳ್ಳಲು ಮರೆಯದಿರಿ. ಅವಿಸ್ಮರಣಿಯ ಅನುಭವ ನೀರಿ ಪ್ರಪಂಚದಾದ್ಯಂತ ಸದ್ದು ಮಾಡಲಿರುವ ಟ್ರೈಲರ್ಗಾಗಿ ನಿರೀಕ್ಷಿಸಿ.
ಕ್ಷಣಕ್ಷಣದ ಅಪ್ಡೇಟ್ಸ್ಗಾಗಿ ಸದಾ ನಮ್ಮೊಂದಿಗೆ ಸಂಪರ್ಕದಲ್ಲಿರಿ.
ಮರೆಯಲಾಗದ ಅನುಭವ ನಿಮ್ಮದಾಗಿಸಿಕೊಳ್ಳಲು ತಯಾರಾಗಿ. ಈ ಕುತೂಹಲಭರಿತ ರೋಮಾಮಚನಕಾರಿ ಪಯಣವನ್ನು ನಾವು ಮುಂದುವರಿಸೋಣ.
ಚರಿತ್ರೆ ನಿರ್ಮಿಸೋಣ ಹಾಗೂ ಭಾರತೀಯ ಸಿನಿಮಾದ ಸಾಮರ್ಥ್ಯವನ್ನು ಸಂಭ್ರಮಿಸೋಣ
– ಸಲಾರ್ ಚಿತ್ರತಂಡ
ಪ್ರಭಾಸ್ ನಾಯಕನಾಗಿ, ಪೃಥ್ವಿರಾಜ್ ಸುಕುಮಾರನ್, ಶೃತಿಹಾಸನ್, ಜಗಪತಿಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರವಿದು. ಸೆಪ್ಟೆಂಬರ್ 28ರಂದು ಈ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.
Salaar Part1:CeasFire teaser Review : ಕೆಜಿಎಫ್ ಹಾದಿಯಲ್ಲೇ ಸಲಾರ್
ADVERTISEMENT
ADVERTISEMENT