ಚಿತ್ರ: 2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆದ ಬೆನ್ನಲ್ಲೇ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿದ್ದ ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರದ ಅತ್ಯಂತ ಜನಪ್ರಿಯ ಅನ್ನಭಾಗ್ಯ (Annabhagya) ಕಾರ್ಯಕ್ರಮ ಇವತ್ತಿನಿಂದ ಹೊಸತನದೊಂದಿಗೆ ರಾಜ್ಯದಲ್ಲಿ ಮತ್ತೆ ಜಾರಿಯಾಗಲಿದೆ.
ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ.
1 ಕೋಟಿ 28 ಲಕ್ಷ ಕಾರ್ಡ್ದಾರರಿಗೆ (Ration Card Holders) ನೇರ ನಗದು ಜಮೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ.
ಭಾರತೀಯ ಆಹಾರ ನಿಗಮ (FCI) ಅಕ್ಕಿ ಪೂರೈಕೆಗೆ (Rice) ನಿರಾಕರಿಸಿರುವ ಹಿನ್ನೆಲೆಯಲ್ಲಿ ಒಂದು ಕೆಜಿಗೆ 34 ರೂಪಾಯಿಗೆ ಪ್ರತಿ ಕುಟುಂಬದ ಸದಸ್ಯರ ಆಧಾರದ ಮೇಲೆ ಹೆಚ್ಚುವರಿ ತಲಾ 5 ಕೆಜಿ ಅಕ್ಕಿಯ ಮೊತ್ತವನ್ನು ಕಾರ್ಡ್ದಾರರ ಖಾತೆಗೆ ಜಮೆ ಮಾಡಲಾಗುತ್ತದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಒಂದು ಕುಟುಂಬದಲ್ಲಿ ಒಬ್ಬನ್ನಷ್ಟೇ ಇದ್ದರೆ ಅವರಿಗೆ ಐದು ಕೆಜಿ ಹೆಚ್ಚುವರಿ ಅಕ್ಕಿ ಬದಲು 170 ರೂಪಾಯಿ ಜಮೆ ಆಗಲಿದೆ. ಒಂದು ವೇಳೆ ಐವರಿದ್ದರೆ ಆಗ ಆ ಕುಟುಂಬಕ್ಕೆ ಪ್ರತಿ ತಿಂಗಳು 850 ರೂಪಾಯಿ ಜಮೆ ಆಗಲಿದೆ.
ನೇರ ನಗದು ಯೋಜನೆ ಮೂಲಕ ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ ಹಣ ಜಮೆ (DBT) ಆಗಲಿದೆ. ಈ ತಿಂಗಳ ಮೊತ್ತವನ್ನು ಈ ತಿಂಗಳೊಳಗೆ ಜಮೆ ಮಾಡಲಾಗುತ್ತದೆ.
ಯೋಜನೆಯ ಜಾರಿಗೆ ವರ್ಷಕ್ಕೆ ಬಜೆಟ್ನಲ್ಲಿ 10 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ.
44 ಲಕ್ಷ 80 ಸಾವಿರ ಅಂತ್ಯೋದಯ ಯೋಜನೆ ಮತ್ತು 3 ಕೋಟಿ 97 ಲಕ್ಷದಷ್ಟು ಆದ್ಯತಾ ಪಡಿತರ ಚೀಟಿದಾರರಿಗೆ ಅಂದರೆ 4 ಕೋಟಿ 41 ಲಕ್ಷದ 80 ಸಾವಿರ ಮಂದಿಗೆ ಅನ್ನಭಾಗ್ಯ ಹೆಚ್ಚುವರಿ ಅಕ್ಕಿ ಯೋಜನೆಯಿಂದ ಲಾಭವಾಗಲಿದೆ.
ADVERTISEMENT
ADVERTISEMENT