ಪ್ರತಿ ಮನೆಯಲ್ಲಿ ಸ್ಟೀಲ್, ಅಲ್ಯೂಮಿನಿಯಮ್ ಪಾತ್ರೆಗಳಿರುತ್ತದೆ. ಅವು ಥಳಥಳ ಹೊಳೆಯಬೇಕು ಎಂದರೇ ಹೀಗೆ ಮಾಡಿ..
* ಅಡುಗೆ ಮಾಡುವಾಗ ಕೆಲವೊಮ್ಮೆ ಪಾತ್ರೆಗಳ ತಳ ಅಂಟುತ್ತದೆ.. ನೀರಿನಲ್ಲಿ ಎರಡು ಹನಿ ನಿಂಬೆ ರಸವನ್ನು ಹಾಕಿ ಕೆಲವು ಕ್ಷಣ ಬಿಟ್ಟು ಪಾತ್ರೆಗಳನ್ನು ಉಜ್ಜಿದರೆ ಆ ಕಲೆಗಳು ಮಾಯವಾಗುತ್ತದೆ.
* ಪಾತ್ರೆಗಳಿಗೆ ಎಣ್ಣೆ ಜಿಡ್ಡು ಆದರೆ ಬೇಗ ಹೋಗಲ್ಲ.. ನೀರಿನಲ್ಲಿ ಸ್ವಲ್ಪ ಡಿಟರ್ಜೆಂಟ್ ಪೌಡರ್ ಹಾಕಿ ತೊಳೆದು ನೋಡಿ.. ಜಿಡ್ಡು ಕ್ಷಣದಲ್ಲಿ ಮಾಯವಾಗುತ್ತದೆ.
* ಪಿಂಗಾಣಿ ಪಾತ್ರೆಗಳು ಹೊಳೆಯಬೇಕು ಎಂದರೆ ಮೊದಲು ಬೂದಿಯಿಂದ ಉಜ್ಜಿ. ನಂತರ ಸೋಪ್ ನೀರಿನಲ್ಲಿ ತೊಳೆದಲ್ಲಿ ಅವು ಹೊಸದರಂತೆ ಕಾಣುತ್ತದೆ.
* ಬೆಳ್ಳಿ ವಸ್ತುಗಳ ಹೊಳಪು ಕಡಿಮೆ ಆಗಬಾರದು ಎಂದರೇ ಅವುಗಳನ್ನು ಇಡುವ ಬ್ಯಾಗ್/ಬಾಕ್ಸ್‌ನಲ್ಲಿ ಕರ್ಪೂರ ಹಾಕಿ ನೋಡಿ.. ಹೊಳಪು ಕಡಿಮೆ ಆಗಲ್ಲ.