ಪ್ಯಾನ್ಕಾರ್ಡ್ ಜೊತೆಗೆ ಆಧಾರ್ ಅನುಸಂಧಾನ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಕೊಟ್ಟಿದ್ದ ಗಡುವು ಮುಗಿದಿದೆ.
ಆಧಾರ್ ಲಿಂಕ್ ಆಗದ ಪ್ಯಾನ್ಕಾರ್ಡ್ ಕೆಲಸಕ್ಕೆ ಬರಲ್ಲ.. ಪ್ಯಾನ್ ಕಾರ್ಡ್ ನೆರವಿಲ್ಲದೇ ಹಲವು ಕೆಲಸಗಳನ್ನು ಮಾಡಲು ಆಗಲ್ಲ.
ಅವು ಏನು ಎಂಬುದನ್ನು ನೋಡೋಣ.
– ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳ ಜೊತೆ ಏಕಕಾಲದಲ್ಲಿ 50ಸಾವಿರ ಮೀರಿ ಲೇವಾದೇವಿ ಮಾಡಲು ಆಗಲ್ಲ.
– ಬೇಸಿಕ್ ಸೇವಿಂಗ್ ಅಕೌಂಡ್, ಟೈಂ ಡಿಪಾಸಿಟ್ ಖಾತೆ ಹೊರತುಪಡಿಸಿ ಇತರೆ ಬ್ಯಾಂಕ್ ಖಾತೆ ತೆರಯಲು ಆಗಲ್ಲ.
– ಹೊಸದಾಗಿ ಕ್ರೆಡಿಟ್ ಇಲ್ಲವೇ ಡೆಬಿಟ್ ಕಾರ್ಡ್ ಹೊಂದಲು ಸಾಧ್ಯವಿಲ್ಲ.
ADVERTISEMENT
– ಸ್ಟಾಕ್ ಮಾರ್ಕೆಟ್ನಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ತೆರಯಲು ಸಾಧ್ಯವಾಗಲ್ಲ.
– ದ್ವಿಚಕ್ರ ವಾಹನವನ್ನು ಖರೀದಿ ಮಾಡಿದರೂ, ಮಾರಾಟ ಮಾಡಿದರೂ ದೊಡ್ಡ ಮಟ್ಟದಲ್ಲಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
– 10 ಲಕ್ಷ ಮೌಲ್ಯವನ್ನು ಮೀರಿದ ಸ್ಥಿರಾಸ್ತಿಗಳನ್ನು ಮಾರಾಟ ಮಾಡಿದರೂ ದೊಡ್ಡ ಮಟ್ಟದಲ್ಲಿ ತೆರಿಗೆ ವಸೂಲಿ ಮಾಡುತ್ತಾರೆ.
– ವಾಹನ,ಸ್ಥಿರಾಸ್ತಿ ಅಲ್ಲದೇ ಉಳಿದ ಯಾವುದೇ ವಸ್ತು ಖರೀದಿ ಮೌಲ್ಯ 2 ಲಕ್ಷ ದಾಟಿದಲ್ಲಿ ತೆರಿಗೆ ಭಾರ ಹೆಚ್ಚಿರುತ್ತದೆ.
– ಪ್ಯಾನ್ ಜೊತೆ ಆಧಾರ್ ಲಿಂಕ್ ಮಾಡದವರಿಗೆ ಈಗಲೂ ಅವಕಾಶವಿದೆ.
– 1000 ರೂಪಾಯಿ ದಂಡ ಕಟ್ಟಿ ಅಧಾರ್ ಅಧಿಕಾರಿಗಳಿಗೆ ಮಾಹಿತಿ ನೀಡಿದಲ್ಲಿ 30 ದಿನಗಳ ಬಳಿಕ ಪ್ಯಾನ್ ಕಾರ್ಡ್ ಮರುಸ್ಥಾಪನೆ ಮಾಡುತ್ತಾರೆ.
ADVERTISEMENT