ಉತ್ತರ ಭಾರತ ಸೇರಿ ಇಡೀ ದೇಶದಲ್ಲಿ ಮಳೆ ಕಡಿಮೆಯಾಗಿದೆ. ಅದರಲ್ಲೂ ಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ಮುಂಗಾರು ಕೈಕೊಟ್ಟಿದೆ. ವಾಯುವ್ಯ ಭಾರತದಲ್ಲಿ ಮಾತ್ರ ಶೇಕಡಾ 42ರಷ್ಟು ಅಧಿಕ ಮಳೆಯಾಗಿದೆ.
ದಕ್ಷಿಣ ಭಾರತದಲ್ಲಿ ಶೇಕಡಾ 45ರಷ್ಟು ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಕರ್ನಾಟಕ ಸೇರಿದಂತೆ 17 ರಾಜ್ಯಗಳಲ್ಲಿ ಮಳೆ ಕೊರತೆ ಎದುರಾಗಿದೆ. ವಾಡಿಕೆಗಿಂತ ಕಡಿಮೆ ವರ್ಷಧಾರೆಯಾಗಿದೆ.
ಎಲ್ಲೆಲ್ಲಿ ಕಡಿಮೆ ಮಳೆ? ದಕ್ಷಿಣ ಭಾರತದಲ್ಲಿ ಶೇಕಡಾ 45ರಷ್ಟು, ಪೂರ್ವ ಭಾರತ ಮತ್ತು ಈಶಾನ್ಯ ಭಾರತದಲ್ಲಿ ಶೇಕಡಾ 18ರಷ್ಟು, ಮಧ್ಯಭಾರತದಲ್ಲಿ ಶೇಕಡಾ 6ರಷ್ಟು ಮಳೆ ಕಡಿಮೆಯಾಗಿದೆ
ದಕ್ಷಿಣ ಭಾರತದಲ್ಲಿ ವಾಡಿಕೆಯಂತೆ 160 ಮಿಲಿಮೀಟರ್ ಮಳೆ ಆಗಬೇಕಿತ್ತು. ಆದರೆ, ಈ ಬಾರಿ ಆಗಿರುವುದು ಕೇವಲ 88 ಮಿಲಿ ಮೀಟರ್ ಮಳೆಯಷ್ಟೆ. ಕೇರಳ ಅತಿ ಹೆಚ್ಚು ಅಂದರೆ ಶೇಕಡಾ 70ರಷ್ಟು ಮಳೆಯ ಕೊರತೆಯನ್ನು ಎದುರಿಸಿದೆ.
ರಾಜ್ಯದ 25 ಜಿಲ್ಲೆಗಳ 87 ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. ಮಲೆನಾಡಿನಲ್ಲಿ ಶೇಕಡಾ 64ರಷ್ಟು, ದಕ್ಷಿಣ ಕರ್ನಾಟಕದಲ್ಲಿ ಶೇಕಡಾ 22ರಷ್ಟು, ಉತ್ತರ ಕರ್ನಾಟಕದಲ್ಲಿ ಶೇಕಡಾ 21ರಷ್ಟು, ಬೆಂಗಳೂರು ಭಾಗದಲ್ಲಿ ಶೇಕಡಾ 20ರಷ್ಟು, ಕರಾವಳಿಯಲ್ಲಿ ಶೇಕಡಾ 19ರಷ್ಟು ಮಳೆ ವಾಡಿಕೆಗಿಂತ ಕಡಿಮೆಯಾಗಿದೆ.
ಯಾವ ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಉಂಟಾಗಿದೆ?
1. ಶಿವಮೊಗ್ಗ 2.ಹಾಸನ 3.ಧಾರವಾಡ 4.ಬಳ್ಳಾರಿ 5.ವಿಜಯನಗರ 6.ರಾಮನಗರ 7.ಮಂಡ್ಯ 8.ಮೈಸೂರು 9.ಚಾಮರಾಜನಗರ
ADVERTISEMENT
ADVERTISEMENT