ಇಂದಿನಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಆಗಿದೆ. ಪ್ರತಿ ಲೀಟರ್ಗೆ ಕರ್ನಾಟಕ ಹಾಲು ಒಕ್ಕೂಟ 3 ರೂಪಾಯಿ ಹೆಚ್ಚಳ ಮಾಡಿದೆ.
ನಂದಿನಿ ಟೋನ್ಡ್ ಹಾಲು (ನೀಲಿ ಪೊಟ್ಟಣ)ದ ದರ 39 ರೂಪಾಯಿಗಳಿಂದ 42 ರೂಪಾಯಿಗೆ ಹೆಚ್ಚಳವಾಗಿದೆ.
ನಂದಿನಿ ಹೋಮೋಜಿನೈಸ್ಡ್ ಹಸುವಿನ ಶುದ್ಧ ಹಾಲು (ಹಸಿರು ಪೊಟ್ಟಣ) ದರ ಲೀಟರ್ಗೆ 43 ರೂಪಾಯಿಗಳಿಂದ 46 ರೂಪಾಯಿಗೆ ಏರಿಕೆ ಆಗಿದೆ.
ಶುಭಂ (ಕೇಸರಿ ಪೊಟ್ಟಣ) ಹಾಲು 45 ರೂಪಾಯಿಗಳಿಂದ 48 ರೂಪಾಯಿಗೆ ಏರಿಕೆ ಆಗಿದೆ.
ಮೊಸರು ಪ್ರತಿ ಲೀಟರ್ಗೆ 47 ರೂಪಾಯಿ ರೂಪಾಯಿಗಳಿಂದ 50 ರೂಪಾಯಿಗೆ ಹೆಚ್ಚಳವಾಗಿದೆ.
ಮಜ್ಜಿಗೆ 200 ಮಿಲಿ ಲೀಟರ್ ಪೊಟ್ಟಣದ ದರ 8 ರೂಪಾಯಿಯಿಂದ 9 ರೂಪಾಯಿಗೆ ಹೆಚ್ಚಳವಾಗಿದೆ.
ರೈತರಿಗೆ ಸಹಾಯಧನ ಹೆಚ್ಚಳ:
ಗ್ರಾಹಕರಿಗೆ ತಾನು ಹೆಚ್ಚಳ ಮಾಡಿರುವ ಹಾಲಿನ ಬೆಲೆಯ ಮೊತ್ತವನ್ನು ಕರ್ನಾಟಕ ಹಾಲು ಒಕ್ಕೂಟ ರೈತರಿಗೆ ವರ್ಗಾಯಿಸಲಿದೆ. ಹಾಲು ಒಕ್ಕೂಟಕ್ಕೆ ರೈತರು ಮಾರುವ ಹಾಲಿಗೆ ಪ್ರತಿ ಲೀಟರ್ಗೆ ಸಹಾಯಧನವನ್ನು 3 ರೂಪಾಯಿಯಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ.
ಹಾಲಿಗೆ ಪ್ರತಿ ಲೀಟರ್ಗೆ ರೈತರಿಗೆ ಸಿಗುತ್ತಿದ್ದ 5 ರೂಪಾಯಿ ಪ್ರೋತ್ಸಾಹಧನ 8 ರೂಪಾಯಿಗೆ ಏರಿಕೆ ಆಗಿದೆ.
ಪಶು ಆಹಾರದ ಬೆಲೆ ಹೆಚ್ಚಳದಿಂದಾಗಿ ರಾಜ್ಯದಲ್ಲಿ ಈಗಾಗಲೇ 35 ಸಾವಿರ ಕುಟುಂಬಗಳು ಹೈನುಗಾರಿಕೆಯಿಂದ ದೂರ ಹೋಗಿವೆ. ಇದರಿಂದ ಪ್ರತಿ ತಿಂಗಳು 10 ಲಕ್ಷ ಲೀಟರ್ನ್ನಷ್ಟು ಹಾಲಿನ ಉತ್ಪಾದನೆಯೂ ಕಡಿಮೆ ಆಗಿದೆ.
ಉಳಿದ ಹಾಲಿಗಿಂತ ಅಗ್ಗ:
ಮೂರು ರೂಪಾಯಿ ಬೆಲೆ ಹೆಚ್ಚಳದ ಹೊರತಾಗಿಯೂ ನಂದಿನಿ ಹಾಲು ಉಳಿದ ಹಾಲಿಗಿಂತ ಅತ್ಯಂತ ಕಡಿಮೆ ಮತ್ತು ಅಗ್ಗ.
ಗುಜರಾತ್ ಮೂಲದ ಅಮುಲ್ ಹಾಲಿನ ಬೆಲೆ ಲೀಟರ್ಗೆ 54 ರೂಪಾಯಿ. ಅಂದರೆ ನಂದಿನಿಗಿಂತ 12 ರೂಪಾಯಿ ದುಬಾರಿ.
ಕೇರಳದ ಮಿಲ್ಮಾ ಹಾಲಿನ ದರ ಲೀಟರ್ಗೆ 50 ರೂಪಾಯಿ. ನಂದಿನಿಗಿಂತ ಲೀಟರ್ಗೆ 8 ರೂಪಾಯಿ ದುಬಾರಿ.
ದೆಹಲಿಯಲ್ಲಿ ಹಾಲಿನ ದರ ಲೀಟರ್ಗೆ 54 ರೂಪಾಯಿ, ಮಹಾರಾಷ್ಟ್ರದಲ್ಲಿ 54 ಮತ್ತು ಆಂಧ್ರಪ್ರದೇಶದಲ್ಲಿ 56 ರೂಪಾಯಿ.
ADVERTISEMENT
ADVERTISEMENT