ವಿದೇಶದಿಂದ ಲ್ಯಾಪ್ಟಾಪ್, ಕಂಪ್ಯೂಟರ್, ಟ್ಯಾಬ್ಲೆಟ್ ಆಮದು ಮಾಡಿಕೊಳ್ಳಬಾರದು ಎಂದು ನಿರ್ಬಂಧ ಹೇರಿದ್ದ ತನ್ನದೇ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಾರ್ಪಾಡು ಮಾಡಿದೆ.
ಆಗಸ್ಟ್ 4ರಿಂದಲೇ ನಿಷೇಧ ಹೇರಿದ್ದ ಆದೇಶವನ್ನು ಬದಲಾಯಿಸಿರುವ ಮೋದಿ ಸರ್ಕಾರ ಗಣಕ ತಯಾರಿಕಾ ಕಂಪನಿಗಳಿಗೆ ವಿದೇಶದಿಂದ ಲ್ಯಾಪ್ಟಾಪ್, ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್ ಆಮದಿಗೆ ಅಕ್ಟೋಬರ್ 31ರವರೆಗೆ ಅನುಮತಿ ನೀಡಿದೆ.
ಆಗಸ್ಟ್ 3ರಂದು ಆದೇಶ ಹೊರಡಿಸಿದ್ದ ವಾಣಿಜ್ಯ ಸಚಿವಾಲಯ ಆಗಸ್ಟ್ 4ರಿಂದಲೇ 12 ಗಂಟೆಯಲ್ಲೇ ಲ್ಯಾಪ್ಟಾಪ್, ಪಿಸಿ ಮತ್ತು ಟ್ಯಾಬ್ಲೆಟ್ ಆಮದಿನ ಮೇಲೆ ನಿಷೇಧ ಹೇರಿತ್ತು.
ಆದರೆ ಕಾಲಾವಕಾಶ ನೀಡದೇ ಏಕಾಏಕಿ ಆಮದಿನ ಮೇಲೆ ನಿರ್ಬಂಧ ಹೇರಿದ್ದರ ವಿರುದ್ಧ ಗಣಕ ತಯಾರಿಕಾ ಕಂಪನಿಗಳು ಅಸಮಾಧಾನ ಹೊರಹಾಕಿದ್ದವು.
ಇದಾದ ಬಳಿಕ ತಾನೇ ಹೊರಡಿಸಿದ್ದ ನಿರ್ಬಂಧ ಆದೇಶವನ್ನು ಮೋದಿ ಸರ್ಕಾರ 24 ಗಂಟೆಯೊಳಗೆ ಹಿಂಪಡೆದಿದೆ.
ADVERTISEMENT
ADVERTISEMENT