ADVERTISEMENT
ಆನ್ಲೈನ್ ಗೇಮಿಂಗ್ ಕಂಪನಿ MPL 350 ಮಂದಿ ನೌಕರರನ್ನು ಕೆಲಸದಿಂದ ತೆಗೆಯುವ ನಿರ್ಧಾರ ಪ್ರಕಟಿಸಿದೆ.
ಆನ್ಲೈನ್ ಗೇಮಿಂಗ್ ಮೇಲೆ ಶೇಕಡಾ 28ರಷ್ಟು ಜಿಎಸ್ಟಿ ತೆರಿಗೆ ವಿಧಿಸುವ ನಿರ್ಧಾರದ ಬೆನ್ನಲ್ಲೇ MPL ನೌಕರಿ ಕಡಿತದ ನಿರ್ಧಾರ ಪ್ರಕಟಿಸಿದೆ.
ನೌಕರಿ ಕಡಿತದ ಬಗ್ಗೆ MPL ಸಹ ಸಂಸ್ಥಾಪಕ ಸಾಯ್ ಶ್ರೀನಿವಾಸ್ ಅವರು ಉದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ.
ಶೇಕಡಾ 28ರಷ್ಟು ಜಿಎಸ್ಟಿ ತೆರಿಗೆ ಹೇರಿಕೆಯಿಂದ ಕಂಪನಿಯ ಮೇಲಿನ ಭಾರ ಶೇಕಡಾ 350ರಿಂದ 400ರಷ್ಟು ಹೆಚ್ಚಳ ಆಗಲಿದೆ. ಕಂಪನಿ ಶೇಕಡಾ 50ರಿಂದ ಗರಿಷ್ಠ 100ರಷ್ಟು ಭಾರ ಹೆಚ್ಚಳವಾದರೂ ಅದಕ್ಕೆ ಸಿದ್ಧವಾಗಿತ್ತು. ಆದರೆ ದಿಢೀರ್ ಆಗಿ ಭಾರೀ ಹೆಚ್ಚಳದಿಂದ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಸಾಯ್ ಶ್ರೀನಿವಾಸ್ ಅವರು ಹೇಳಿದ್ದಾರೆ.
ADVERTISEMENT