ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ ಜೋಡೋ ಪಾದಯಾತ್ರೆಯ ಎರಡನೇ ಭಾಗ ಗುಜರಾತ್ನಿಂದ ಆರಂಭವಾಗಲಿದೆ.
ಗುಜರಾತ್ನಿಂದ ಆರಂಭ ಆಗಲಿರುವ ಪಾದಯಾತ್ರೆ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಕೊನೆಯಾಗಲಿದೆ.
ಮಾಹಿತಿಗಳ ಪ್ರಕಾರ ಗುಜರಾತ್ನ ಪೋರಬಂದರ್ನಿಂದ ಪಾದಯಾತ್ರೆ ಶುರುವಾಗುವ ನಿರೀಕ್ಷೆ ಇದೆ.
ಕಳೆದ ವರ್ಷ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಶುರುವಾಗಿದ್ದ ಪಾದಯಾತ್ರೆ ಜನವರಿ 30ರಂದು ಮಹಾತ್ಮ ಗಾಂಧಿ ಹುತಾತ್ಮರಾದ ದಿನ ಕಾಶ್ಮೀರದಲ್ಲಿ ಕೊನೆಯಾಗಿತ್ತು.
4 ಸಾವಿರದ 80 ಕಿಲೋ ಮೀಟರ್ ನಡಿಗೆ ಮೂಲಕ ರಾಹುಲ್ ಗಾಂಧಿ ಅವರು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಿದ್ದರು.
136 ಮೊದಲ ಹಂತದ ಪಾದಯಾತ್ರೆಯಲ್ಲಿ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ರಾಜ್ಯಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದರು.
ADVERTISEMENT
ADVERTISEMENT