ಭಾರತದ ನ್ಯಾಯಾಂಗ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಭಾರತೀಯ ದಂಡ ಸಂಹಿತೆ ಮತ್ತು ಅಪರಾಧ ದಂಡ ಸಂಹಿತೆಯ ಬದಲು ಹೊಸ ಸಂಹಿತೆಗಳನ್ನು ಜಾರಿಗೊಳಿಸುವ ಸಂಬಂಧ ಮಸೂದೆ ಮಂಡಿಸಿದೆ.
ಅಚ್ಚರಿಯ ರೀತಿಯಲ್ಲಿ ಸಂಸತ್ ಅಧಿವೇಶನದ ಕೊನೆಯ ದಿನವಾದ ಇವತ್ತು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಸೂದೆ ಮಂಡಿಸಿದರು.
ಐಪಿಸಿ (ಇಂಡಿಯನ್ ಪೆನಾಲ್ ಕೋಡ್ )ಗೆ ಭಾರತೀಯ ನ್ಯಾಯ ಸಂಹಿತೆ 2023ಯನ್ನು ಜಾರಿಗೆ ತರಲಾಗುತ್ತದೆ.
ಕ್ರಿಮಿನಲ್ ಪ್ರೊಸಿಜರ್ ಕೋಡ್ ಬದಲು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ಯನ್ನು ಜಾರಿಗೆ ತರಲಾಗುತ್ತದೆ.
ಎವಿಡೆನ್ಸ್ ಕಾಯ್ದೆಯ ಬದಲು ಭಾರತೀಯ ಸಾಕ್ಷ್ಯ ಸಂಹಿತೆಯನ್ನು ಜಾರಿಗೆ ತರಲಾಗುತ್ತದೆ.
ಈ ಹಿಂದೆ ಐಪಿಸಿಯಲ್ಲಿ 511 ಕಲಂಗಳ ಬದಲಿಗೆ ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ 356 ಕಲಂಗಳಿರಲಿವೆ. ಅಪರಾಧ ಸಂಹಿತೆಯಲ್ಲಿದ್ದ 484 ಕಲಂಗಳ ಬದಲಿಗೆ ಹೊಸ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಲ್ಲಿ 533 ಕಲಂಗಳಿರಲಿವೆ. ಎವಿಡೆನ್ಸ್ ಕಾಯ್ದೆಯಲ್ಲಿರುವ 167 ಕಲಂಗಳ ಬದಲಿಗೆ ಹೊಸ ಭಾರತೀಯ ಸಾಕ್ಷ್ಯ ಸಂಹಿತೆಯಲ್ಲಿ 170 ಕಲಂಗಳಿರಲಿವೆ.
ADVERTISEMENT
ADVERTISEMENT