No Result
View All Result
ಸಾಲ ಪಾವತಿಸಲು ವಿಫಲರಾದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದ ಮತ್ತು ನಟ ಸನ್ನಿ ಡಿಯೋಲ್ಗೆ ಸೇರಿದ ಮುಂಬೈನಲ್ಲಿರುವ ಬಂಗಲೆಯನ್ನು ಹರಾಜು ಹಾಕುವುದಾಗಿ ಹೊರಡಿಸಿದ್ದ ಪ್ರಕಟಣೆಯನ್ನು ಪ್ರಕಟಣೆ ಹೊರಡಿಸಿದ 24 ಗಂಟೆಗಳಲ್ಲೇ ಬ್ಯಾಂಕ್ ವಾಪಸ್ ಪಡೆದಿದೆ.
ತಾಂತ್ರಿಕ ಕಾರಣದಿಂದ ಹರಾಜು ನೋಟಿಸ್ನ್ನು ವಾಪಸ್ ಪಡೆದಿರುವುದಾಗಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಹೇಳಿದೆ. ಬ್ಯಾಂಕ್ ಆಫ್ ಬರೋಡಾಗೆ ಅಜಯ್ ಸಿಂಗ್ ಡಿಯೋಲ್ ಅಲಿಯಾಸ್ ಸನ್ನಿ ಡಿಯೋಲ್ 56 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದರು.
ಬಾಕಿ ಸಾಲ ವಸೂಲಿ ಸಂಬಂಧ ಮುಂಬೈನ ಜುಹುನಲ್ಲಿರುವ ಬಂಗಲೆಯನ್ನು ಸೆಪ್ಟೆಂಬರ್ 25ರಂದು ಹರಾಜು ಹಾಕುವುದಾಗಿ ಬ್ಯಾಂಕ್ ಆಫ್ ಬರೋಡಾ ಆಗಸ್ಟ್ 19ರಂದು ಪ್ರಮುಖ ದೈನಿಕ ಟೈಮ್ಸ್ ಆಫ್ ಇಂಡಿಯಾದ ಮುಂಬೈ ಆವೃತ್ತಿಯಲ್ಲಿ ಹರಾಜು ನೋಟಿಸ್ ಪ್ರಕಟಿಸಿತ್ತು.
No Result
View All Result
error: Content is protected !!