ಆಗಸ್ಟ್ 26ರಂದು ಬೆಂಗಳೂರಿಗೆ ಬರಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೋ ಮುಖ್ಯಕಚೇರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ರಾಜಧಾನಿಯ ಪ್ರಮುಖ ರಸ್ತೆಗಳನ್ನು ಬಳಸದಂತೆ ಸಂಚಾರಿ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಬೆಳಗ್ಗೆ 7 ಗಂಟೆಗೆ ಇಸ್ರೋ ಕಚೇರಿಗೆ ಭೇಟಿ ನೀಡಿ ಚಂದ್ರಯಾನ ಯಶಸ್ವಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಲಿರುವ ಪ್ರಧಾನಿ ಮೋದಿ ರೋಡ್ ಶೋವನ್ನೂ ನಡೆಸಲಿದ್ದಾರೆ.
ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 9.30ರವರೆಗೆ ಈ ಕೆಳಗಿನ ರಸ್ತೆಗಳನ್ನು ಬಳಸದಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
1. ಹಳೆ ಏರ್ಪೋರ್ಟ್ ರಸ್ತೆ
2. ಹಳೆ ಮದ್ರಾಸ್ ರಸ್ತೆ
3. ಎಂ ಜಿ ರಸ್ತೆ
4. ಕಬ್ಬನ್ ರಸ್ತೆ
5. ರಾಜಭವನ ರಸ್ತೆ
6. ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್)
7. ಸಿ ವಿ ರಾಮನ್ ರಸ್ತೆ
8. ಯಶವಂತಪುರ ಫ್ಲೈ ಓವರ್
9. ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರ)
10. ಮಾಗಡಿ ರಸ್ತೆ
11. ಹೊರವರ್ತುಲ ರಸ್ತೆ (ಗೊರಗುಂಟೆಪಾಳ್ಯದಿಂದ ಸುಮ್ಮನಹಳ್ಳಿ)
12. ಗುಬ್ಬಿ ತೋಟದಪ್ಪ ರಸ್ತೆ
13. ಜಾಲಹಳ್ಳಿ ಕ್ರಾಸ್ ರಸ್ತೆ
ADVERTISEMENT
ADVERTISEMENT