ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ರೌಡಿಶೀಟರ್ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲು ಮಾಡಲಾಗಿರುವ ರೌಡಿಪಟ್ಟಿಯನ್ನು ತೆಗೆದುಹಾಕುವಂತೆ ಆಗ್ರಹಿಸಿರುವ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು, ಪುನೀತ್ ಕೆರೆಹಳ್ಳಿಗಾಗಿ ಉಪವಾಸ ಸತ್ಯಾಗ್ರಹ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ಎರಡು ಪುಟಗಳ ಆಗ್ರಹ ಪತ್ರ ನೀಡಿರುವ ಶಾಸಕ ಪೂಂಜಾ ಅವರು, ಪುನೀತ್ ಕೆರೆಹಳ್ಳಿಯವರಿಗೆ ಏನೇ ತೊಂದರೆ ಆದರೂ ಸರ್ಕಾರವೇ ನೇರ ಹೊಣೆ ಮತ್ತು ಅವರಿಗೆ ಯಾವುದೇ ಸಮಸ್ಯೆಯಾದರೂ ರಾಜ್ಯದ ಎಲ್ಲ ಹಿಂದೂ ಕಾರ್ಯಕರ್ತರು ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಲು ಸಿದ್ಧರಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಆಗಸ್ಟ್ 17ರಂದು ಸರ್ಕಾರ ಗೂಂಡಾ ಕಾಯ್ದೆಯಡಿ ರೌಡಿಪಟ್ಟಿ ತೆರೆದಿದೆ.
ಅಕ್ಟೋಬರ್ 2ರಂದು ಗಾಂಧಿ ಜಯಂತಿಯಂದು ತಮ್ಮ ವಿರುದ್ಧದ ರೌಡಿಪಟ್ಟಿ ಕೈಬಿಡುವಂತೆ ಆಗ್ರಹಿಸಿ ಪುನೀತ್ ಕೆರೆಹಳ್ಳಿ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಆ ಬಳಿಕ ಪೊಲೀಸರು ಕೆರೆಹಳ್ಳಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ADVERTISEMENT
ADVERTISEMENT