ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಮೃತರನ್ನು ಬಸಪ್ಪ, ಲಿಂಗಪ್ಪ ಮತ್ತು ಆನಂದ ಎಂದು ಗುರುತಿಸಲಾಗಿದೆ. ಮಡಿಕೇರಿ ನಗರದ ಸ್ಟಿವನ್ ಹಿಲ್ ಬಳಿ ದುರಂತ ಸಂಭವಿಸಿದೆ.
ಮೃತರೆಲ್ಲರೂ ಹುಬ್ಬಳ್ಳಿ ಮೂಲದ ಕಾರ್ಮಿಕರು. ಮಣ್ಣಿನಡಿ ಸಿಲುಕಿರುವ ಉಳಿದ ಇಬ್ಬರು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ದುರಂತ ಸ್ಥಳಕ್ಕೆ ಕಾಂಗ್ರೆಸ್ ಶಾಸಕ ಮಂಥರ್ಗೌಡ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಭೇಟಿ ನೀಡಿದ್ದಾರೆ.
ADVERTISEMENT
ADVERTISEMENT