ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಗಳಿಸಿರುವ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಲಭ್ಯರಿಲ್ಲ.
ತಾವು ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಬಗ್ಗೆ ವಿರಾಟ್ ಕೊಹ್ಲಿ ಅವರು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ.
ವಿಶ್ವಕಪ್ ಫೈನಲ್ನಲ್ಲಿ ಆಘಾತಕಾರಿಯಾಗಿ ಸೋತಿರುವ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.
ಪ್ರವಾಸದ ಮೊದಲ ಭಾಗವಾಗಿ ಮೊದಲಿಗೆ ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಾಗುತ್ತದೆ. ಮೊದಲ ಟಿ-ಟ್ವೆಂಟಿ ಪಂದ್ಯವನ್ನು ಡಿಸೆಂಬರ್ 10ರಂದು ಡರ್ಬನ್ನಲ್ಲಿ ಆಡಲಾಗುತ್ತದೆ.
ಡಿಸೆಂಬರ್ 17,19,21ರಂದು ಮೂರು ಏಕದಿನ ಪಂದ್ಯಗಳೂ ನಡೆಯಲಿವೆ.
ಮೂರು ಟಿ-ಟ್ವೆಂಟಿ ಮತ್ತು ಮೂರು ಏಕದಿನ ಪಂದ್ಯಗಳಿಂದ ದೂರ ಉಳಿಯಲಿರುವ ಕೊಹ್ಲಿ ಅವರು ಡಿಸೆಂಬರ್ 26ರಂದು ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ವಿಶ್ವಕಪ್ನ 11 ಪಂದ್ಯಗಳಲ್ಲಿ 35 ವರ್ಷದ ಕೊಹ್ಲಿ ಅವರು 765 ರನ್ಗಳನ್ನು ಸಿಡಿಸಿದ್ದರು.
ADVERTISEMENT
ADVERTISEMENT