ಐಸಿಸಿಯಿಂದ ನಿಷೇಧಕ್ಕೊಳಗಾಗಿರುವ ಶ್ರೀಲಂಕಾ ಕ್ರಿಕೆಟ್ ಆಡಳಿತ ಮಂಡಳಿ ಭಾರತ ತಂಡದ ಜೊತೆಗೆ ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡುವ ಬಗ್ಗೆ ಘೋಷಣೆ ಮಾಡಿದೆ.
ಮುಂದಿನ ವರ್ಷ ತಾನು ಆಡಲಿರುವ ಕ್ರಿಕೆಟ್ ಪಂದ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶ್ರೀಲಂಕ ಕ್ರಿಕೆಟ್ 10 ಟೆಸ್ಟ್, 21 ಏಕದಿನ ಪಂದ್ಯ, 21 ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಿದೆ.
ಮುಂದಿನ ವರ್ಷದ ಜೂನ್-ಜುಲೈನಲ್ಲಿ ನಡೆಯಲಿರುವ ಐಸಿಸಿ ಟಿ-ಟ್ವೆಂಟಿ ವಿಶ್ವಕಪ್ನಲ್ಲೂ ಭಾಗವಹಿಸಲಿದೆ.
ಭಾರತ ಮಾತ್ರವಲ್ಲದೇ ಜಿಂಬಾಬ್ವೆ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ಇಂಡೀಸ್, ದಕ್ಷಿಣ ಆಫ್ರಿಕಾ ಸರಣಿ ಆಡಲಿದೆ.
ಮುಂದಿನ ವರ್ಷ ನ್ಯೂಜಿಲೆಂಡ್ ಜೊತೆಗೆ ಒಟ್ಟು ಮೂರು ಬಾರಿ ಐದು ಸರಣಿಗಳಲ್ಲಿ ಮುಖಾಮುಖಿಯಾಗಲಿದೆ.
ಶ್ರೀಲಂಕ ಆಡಳಿತ ಮಂಡಳಿಗೆ ನಿಷೇಧ ಹೇರಿರುವ ಐಸಿಸಿ ದ್ವೀಪರಾಷ್ಟ್ರದಲ್ಲಿ ನಡೆಯಬೇಕಿರುವ ಅಂಡರ್-೧೯ ವಿಶ್ವಕಪ್ನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಿದೆ.
ADVERTISEMENT
ADVERTISEMENT