ಮೊಬೈಲ್ ಕಳೆದು ಹೋಗಿದ್ಯಾ..? ಕಳೆದು ಹೋದ ಮೊಬೈಲ್ ಪತ್ತೆ ಹಚ್ಚೋದು ಹೇಗೆ..? ಕಳೆದು ಹೋದ ಮೊಬೈಲ್ನ್ನು ಬ್ಲಾಕ್ ಮಾಡೋದು ಹೇಗೆ..? ಇಲ್ಲಿದೆ ಸುಲಭ ಪರಿಹಾರ.
ದೂರಸಂಪರ್ಕ ಇಲಾಖೆ ಅಡಿಯಲ್ಲಿ ಬರುವ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟ್ರಿಕ್ಸ್ ಸಂಚಾರಿ ಸಾರಥಿ ಎಂಬ ಪೋರ್ಟಲ್ನ್ನು ಅಭಿವೃದ್ಧಿ ಪಡಿಸಿದೆ.
ಮೊಬೈಲ್ ಕಳೆದುಕೊಂಡವರು ಸಂಚಾರಿ ಸಾರಥಿ ಹೋಗಿ ತಮ್ಮ ಮೊಬೈಲ್ನ್ನು ಬ್ಲಾಕ್ ಮಾಡಬಹುದು.
ಡೂಪ್ಲಿಕೇಟ್ ಸಿಮ್ ಮತ್ತು ಪೊಲೀಸರಿಗೆ ದೂರು:
ಸಂಚಾರಿ ಸಾರಥಿ ವೆಬ್ಸೈಟ್ನಲ್ಲಿ ಮೊಬೈಲ್ ಬ್ಲಾಕ್ ಮಾಡುವುದಕ್ಕೂ ಮೊದಲು ಮೊಬೈಲ್ ಕಳೆದುಕೊಂಡವರು ಕಳೆದುಹೋದ ಮೊಬೈಲ್ನಲ್ಲಿರುವ ಡೂಪ್ಲಿಕೇಟ್ ಸಿಮ್ ಪಡೆದುಕೊಳ್ಳಬೇಕು ಮತ್ತು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ದೂರು ಸ್ವೀಕೃತಿ ಪತ್ರವನ್ನು ಪಡೆಯಬೇಕು.
ಆ ಬಳಿಕ ಸಂಚಾರಿ ಸಾಥಿ ವೆಬ್ಸೈಟ್ಗೆ ಹೋಗಿ ಅಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಬೇಕು.
ಸಂಚಾರಿ ಸಾಥಿಯಲ್ಲಿ ದಾಖಲು ಮಾಡಬೇಕಾಗಿರುವ ಮಾಹಿತಿಗಳು: https://sancharsaathi.gov.in/
1. ಮೊಬೈಲ್ ನಂಬರ್
2. ಮೊಬೈಲ್ ನಂಬರ್ 2 – ಒಂದು ವೇಳೆ ಡೂಪ್ಲಿಕೇಟ್ ಸಿಮ್ ಇದ್ದರೆ
3. ಐಎಂಇಐ 1 : 15 ಅಂಕಿಗಳ ನಂಬರ್ (International Mobile Equipment Identity Number)
4. ಐಎಂಇಐ 2 : 15 ಅಂಕಿಗಳ ನಂಬರ್ (ಒಂದು ವೇಳೆ ಡೂಪ್ಲಿಕೇಟ್ ಸಿಮ್ ಇದ್ದರೆ)
5. ಮೊಬೈಲ್ ಕಂಪನಿಯ ಬ್ರ್ಯಾಂಡ್
6. ಮೊಬೈಲ್ ಖರೀದಿ ರಶೀದಿ ಅಪ್ಲೋಡ್ ಮಾಡ್ಬೇಕು
7. ಎಲ್ಲಿ ಕಳೆದು ಹೋಗಿದ್ದು ಎಂಬ ಮಾಹಿತಿ
8. ಕಳೆದು ಹೋದ ದಿನಾಂಕ
9. ಕೃತ್ಯ ನಡೆದ ರಾಜ್ಯ
10. ಕೃತ್ಯ ನಡೆದ ಜಿಲ್ಲೆ
11. ಕೃತ್ಯ ನಡೆದ ಠಾಣಾ ವ್ಯಾಪ್ತಿ
12. ಪೊಲೀಸ್ ಠಾಣೆಯಲ್ಲಿ ಕೊಟ್ಟ ದೂರಿನ ಸಂಖ್ಯೆ
13. ಪೊಲೀಸ್ ದೂರಿನ ಪ್ರತಿ ಅಪ್ಲೋಡ್ ಮಾಡ್ಬೇಕು
14. ಮೊಬೈಲ್ ಮಾಲೀಕನ ಹೆಸರು
15. ವಿಳಾಸ
16. ದೃಢೀಕರಣ ದಾಖಲೆ ಅಪ್ಲೋಡ್ ಮಾಡ್ಬೇಕು (ಆಧಾರ್, ಪ್ಯಾನ್, ವೋಟರ್ ಐಡಿ ಇತ್ಯಾದಿ ದಾಖಲೆಗಳ ಪ್ರತಿ)
17. ದೃಢೀಕರಣ ದಾಖಲೆಯ ಸಂಖ್ಯೆ ನಮೂದು ಮಾಡ್ಬೇಕು
18. ಒಟಿಪಿ ಬರಬೇಕಿರುವ ಮೊಬೈಲ್ ನಂಬರ್
19. ಓಟಿಪಿ ದಾಖಲಿಸಿ ಬ್ಲಾಕ್ಗೆ ಅರ್ಜಿ ಸಲ್ಲಿಸಬಹುದು
ಈ ದೂರು ಸಲ್ಲಿಕೆ ಆದ ಬಳಿಕ ಸಂಬಂಧಪಟ್ಟ ಪೊಲೀಸ್ ಠಾಣೆ ಮತ್ತು ಟೆಲಿಕಾಂ ಕಂಪನಿಗಳಿಗೆ ಮಾಹಿತಿ ರವಾನೆಯಾಗುತ್ತದೆ.
ಕದ್ದ ಮೊಬೈಲ್ ಆನ್ ಮಾಡಿದರೆ ಆಗ ತಕ್ಷಣವೇ ಸಂಬಂಧಪಟ್ಟ ಪೊಲೀಸರು ಮತ್ತು ಟೆಲಿಕಾಂ ಕಂಪನಿಗಳಿಗೆ ಮಾಹಿತಿ ರವಾನೆಯಾಗಿ ಕದ್ದ ಆ ಮೊಬೈಲ್ನ್ನು ಯಾರು, ಎಲ್ಲಿ ಬಳಸುತ್ತಿದ್ದಾರೆ ಎಂಬ ಮಾಹಿತಿ ಪತ್ತೆಯಾಗುತ್ತದೆ.
ಮೊಬೈಲ್ ಕಳವು ಪ್ರಕರಣಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ವರ್ಷಕ್ಕೆ ನಮ್ಮಲ್ಲಿ 1 ಲಕ್ಷದ 68 ಸಾವಿರ ಮೊಬೈಲ್ ಕಳುವಾಗುತ್ತದೆ. ದೆಹಲಿಯಲ್ಲಿ ವರ್ಷಕ್ಕೆ 4 ಲಕ್ಷದ 40 ಸಾವಿರ ಮೊಬೈಲ್ ಕಳುವಾಗುತ್ತದೆ.
ಈ ರೀತಿ ಬ್ಲಾಕ್ ಮನವಿ ಆಧರಿಸಿ ದೇಶದಲ್ಲಿ ಒಟ್ಟು 10 ಲಕ್ಷದ 76 ಸಾವಿರ ಮೊಬೈಲ್ಗಳನ್ನು ಬ್ಲಾಕ್ ಮಾಡಲಾಗಿದೆ. ಅವುಗಳಲ್ಲಿ 5 ಲಕ್ಷದ 13 ಸಾವಿರ ಮೊಬೈಲ್ಗಳನ್ನು ಪತ್ತೆ ಹಚ್ಚಲಾಗಿದೆ.
ADVERTISEMENT
ADVERTISEMENT