ಜಾತಿಗಣತಿ ವರದಿ ವಿಷಯದಲ್ಲಿ ಸಂಪುಟದ ತೀರ್ಮಾನವೇ ಅಂತಿಮ ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಅವರು ಹೇಳಿದ್ದಾರೆ.
ಜಾತಿ ಗಣತಿಗೆ ಕ್ಯಾಬಿನೆಟ್ನಲ್ಲಿ ಒಪ್ಪಿಗೆ ಆದ ಮೇಲೆ ಯಾರ ಮಾತೂ ಬರುವುದಿಲ್ಲ. ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಜಾತಿ ಗಣತಿ ವರದಿ ಬಿಡುಗಡೆ ಮಾಡುವಂತೆ ಹೇಳಿದ್ದಾರೆ. ರಾಹುಲ್ ಗಾಂಧಿಯವರೇ ಜಾತಿ ಗಣತಿ ಪರವಾಗಿದ್ದಾರೆ.
ಪಕ್ಷ ಮತ್ತು ಸರ್ಕಾರ ಎಲ್ಲರೂ ಜಾತಿ ಗಣತಿ ಜಾರಿಯ ಪರವಾಗಿದ್ದಾರೆ. ಕೆಲವರು ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರಷ್ಟೇ ಎಂದು ಮೈಸೂರಲ್ಲಿ ಸಚಿವ ಮಹದೇವಪ್ಪ ಅವರು ಹೇಳಿದ್ದಾರೆ.
ADVERTISEMENT
ADVERTISEMENT