ದೇಶಾದ್ಯಂತ ಅಡುಗೆ ಅನಿಲದ ಸಿಲಿಂಡರ್ ದರವನ್ನು ಹೆಚ್ಚಳ ಮಾಡಲಾಗಿದೆ. ಹೊಸ ಬೆಲೆ ಏರಿಕೆ ಇಂದಿನಿಂದಲೇ ಜಾರಿಯಾಗಲಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 21 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಆದರೆ ಮನೆ ಬಳಕೆಯ ಅಡುಗೆ ಸಿಲಿಂಡರ್ ಬೆಲೆ ಹೆಚ್ಚಳ ಮಾಡಲಾಗಿಲ್ಲ.
ಪಂಚ ರಾಜ್ಯಗಳ ಮತದಾನ ಮುಗಿದ ಬೆನ್ನಲ್ಲೇ ಬೆಲೆ ಏರಿಕೆ ಆಗಿರುವುದೂ ಮತ್ತು ಪ್ರತಿ 15 ದಿನಕ್ಕೊಮ್ಮೆ ತೈಲ ಕಂಪನಿಗಳು ಅಡುಗೆ ಅನಿಲದ ಬೆಲೆ ಪರಿಷ್ಕರಣೆ ಮಾಡಿರುವುದು ಕಾಕತಾಳೀಯವೇ ಸರಿ.
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ 450 ರೂಪಾಯಿ ಅಡುಗೆ ಸಿಲಿಂಡರ್ ನೀಡುವ ವಾಗ್ದಾನವನ್ನು ಬಿಜೆಪಿ ಮಾಡಿತ್ತು.
ನವೆಂಬರ್ 1ರಂದು ವಾಣಿಜ್ಯ ಬಳಕೆಯ ಅಡುಗೆ ಅನಿಲದ ಬೆಲೆಯನ್ನು 100 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ನವೆಂಬರ್ 16ರಂದು 57 ರೂಪಾಯಿ ಇಳಿಸಲಾಗಿತ್ತು.
ಈಗ ಮತ್ತೆ 21 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಂದರೆ ಒಂದು ತಿಂಗಳ ಅಂತರದಲ್ಲಿ 64 ರೂಪಾಯಿ ದುಬಾರಿಯಾಗಿದೆ
ADVERTISEMENT
ADVERTISEMENT