ಮೈಸೂರು: ಕಾಳಿ ಮಠದ ರಿಷಿ ಕುಮಾರ್ ಸ್ವಾಮೀಜಿ ಸದಾ ಒಂದಲ್ಲೊಂದು ಸುದ್ದಿಯಲ್ಲಿ ಇರುತ್ತಾರೆ. ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಓರ್ವ ಬುದ್ದಿಮಾಂದ್ಯ ಎಂದು ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ರಿಷಿ ಕುಮಾರ್ ಸ್ವಾಮೀಜಿ ವಿಡಿಯೋದಲ್ಲಿ ರಾಹುಲ್ ಗಾಂಧಿಯವರನ್ನು ಮಹಾಭಾರತದ ಧೃತರಾಷ್ಟ್ರಗೆ ಹೋಲಿಸಿದ್ದಾರೆ.
ಈಗ ಒಬ್ಬ ಬುದ್ಧಿಮಾಂದ್ಯನನ್ನು ಪ್ರಧಾನಿ ಮಾಡಲು ಸಾಧ್ಯವಿಲ್ಲ. ಸನಾತನ ಧರ್ಮದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.