ಬೆಳಗಾವಿ:ದಕ್ಷಿಣ ಕರ್ನಾಟಕದ ನಾಯಕತ್ವದಡಿ ಕೆಲಸ ಮಾಡಬೇಕು. ಎಲ್ಲಾ ಬೆಂಗಳೂರು, ಮೈಸೂರಿನವರು ಲಾಭ ಹೊಡೆಯುತ್ತಿದ್ದಾರೆ. ಉತ್ತರಕರ್ನಾಟಕಕ್ಕೆ ನ್ಯಾಯಕೊಡುವವರೆಗೆ ಹಾಜರಾಗಲ್ಲ. ನಾನು ಬಿಜೆಪಿ ಶಾಸಕಾಂಗ ಪಕ್ಷಕ್ಕೆ ಹಾಜರಾಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣ ತೆಲಂಗಾಣದಲ್ಲಿ ಕಿತ್ತುಹಾಕಲಿದ್ದಾರೆ. ಪ್ರಾಮಾಣಿಕ ರಾಜಕಾರಣವಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲೂ ಕುಟುಂಬ ರಾಜಕಾರಣ ಇಲ್ವೇ ಎಂಬ ಪ್ರಶ್ನೆ ಕಾಡಿದೆ. ನಾನು ಇಡೀ ದೇಶದಲ್ಲಿ ಅಂದಿದ್ದೇನೆ.ಅದರಲ್ಲಿ ಕರ್ನಾಟಕವೂ ಸೇರಲಿದೆ. ಅದಕ್ಕೇನು ಬೇರೆ ಇದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದೆ ಎಲ್ಲವೂ ರಿಪೇರಿಯಾಗಲಿದೆ.ಉತ್ತರಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದರು.