ADVERTISEMENT
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಮುಚ್ಚಳಿಕೆ ಬರೆಸಿ ಪ್ರಕರಣ ದಾಖಲಿಸಿದ್ದ ಅರಣ್ಯಾಧಿಕಾರಿಗಳ ವಿರುದ್ಧ ಹಕ್ಕುಚ್ಯುತಿ ತನಿಖೆಗೆ ಆದೇಶಿಸಲಾಗಿದೆ. ಸ್ಪೀಕರ್ ಯು ಟಿ ಖಾದರ್ ಅವರು ಆದೇಶ ನೀಡಿದ್ದಾರೆ. ಅರಣ್ಯಾಧಿಕಾರಿಗಳ ವಿರುದ್ಧ ಸದನ ಸಮಿತಿ ತನಿಖೆಗೆ ಸೂಚಿಸಿದ್ದಾರೆ.
ಉಪ್ಪಿನಂಗಡಿ ಅರಣ್ಯಾಧಿಕಾರಿ ಕೆ ಕೆ ಜಯಪ್ರಕಾಶ್ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಹಕ್ಕುಚ್ಯುತಿ ಸಂಬಂಧ ಸ್ಪೀಕರ್ ಆದೇಶಕ್ಕಾಗಿ ಆಗ್ರಹಿಸಿದರು. ಆದರೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಉತ್ತರ ಕೊಡುವುದಕ್ಕೆ ಮುಂದಾದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಸ್ಪೀಕರ್ ಪೀಠದ ಎದುರು ತೆರಳಿ ಘೋಷಣೆ ಕೂಗಿದರು. ಜೊತೆಗೆ ಎಫ್ಐಆರ್ ಹಿಂಪಡೆಯುವಂತೆಯೂ ಆಗ್ರಹಿಸಿದರು.
ಅರಣ್ಯಾಧಿಕಾರಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ನ್ನು ಹಕ್ಕುಭಾದ್ಯತಾ ಸಮಿತಿಗೆ ಕಳುಹಿಸುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಒಂದು ವೇಳೆ ಅರಣ್ಯ ಇಲಾಖೆಯಿಂದಲೇ ಶಾಸಕರ ವಿರುದ್ಧ ಎಫ್ಐಆರ್ ಆಗಿದ್ದರೆ ಹಿಂಪಡೆಯುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.
ನನ್ನ ಮೇಲಷ್ಟೇ ಯಾಕೆ ಎಫ್ಐಆರ್ ಮಾಡಿದರು. ಜಿಲ್ಲೆಯ ಬಿಜೆಪಿ ಶಾಸಕರು ಅಲ್ಲಿದ್ದರು. ಉಳಿದವರೆಲ್ಲ ಮೇಲೆ ಯಾಕೆ ಎಫ್ಐಆರ್ ಹಾಕಿಲ್ಲ. ನಮ್ಮ ಎಂಎಲ್ಸಿ ಮೇಲೆ ಕೈ ಮಾಡಿದರು. ಹೀಗಾಗಿ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದರು.
ADVERTISEMENT