ಹೊರಗೆ ಎಲ್ಲೆಡೆ ಸಿಕ್ಕಾಪಟ್ಟೆ ಚಳಿ ಶುರುವಾಗಿದೆ. ಸಾಲ್ದು ಅಂತ ಮಳೆಯ ಕಾಟ ಬೇರೆ. ಮೈ ಕೊರೆಯುವ ಚಳಿಗೆ ಬಿಸಿಬಿಸಿಯಾಗಿ ಏನಾದ್ರೂ ತಿನ್ತಾ ಇರ್ಬೇಕು ಅನ್ಸುತ್ತೆ. ಟೀ ಓಕೆ ಜೊತೆಗೆ ತಿನ್ನೋಕೆ ಏನಾದ್ರೂ ಸ್ನ್ಯಾಕ್ಸ್ ಬೇಕಲ್ವಾ ? ಚಳಿಗೆ ತಿನ್ನೋಕೆ ಬೆಸ್ಟ್ ಸ್ನ್ಯಾಕ್ಸ್ ರೆಸಿಪಿ ಇಲ್ಲಿದೆ.
ಹೌದು ಸಂಜೆಗೆ ಸ್ನ್ಯಾಕ್ಸ್ಗೆ ರುಚಿಕರವಾದ ತಿಂಡಿ ಮಾಡಬೇಕೆಂದಿದ್ದೀರಾ? ಹಾಗಾದರೆ ಕಾರ್ನ್ ಬೋಂಡಾ ಏಕೆ ಟ್ರೈ ಮಾಡಬಾರದು? ಕಾರ್ನ್ ಬೋಂಡಾ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಸುಲಭವಾಗಿ ಮಾಡಬಹುದು. ನಾವಿಲ್ಲಿ ಕಾರ್ನ್ ಬೋಂಡಾದ ಸಿಂಪಲ್ ರೆಸಿಪಿ ನೀಡಿದ್ದೇವೆ ನೋಡಿ.
ಬೇಕಾಗುವ ಪದಾರ್ಥಗಳು:
- ಕಾರ್ನ್: 1 ಕಪ್
- ಬೇಸನ್: 2 ಚಮಚ
- ಹಸಿರು ಮೆಣಸಿನಕಾಯಿ: 2
- ಈರುಳ್ಳಿ: 1
- ಮೆಣಸಿನ ಪುಡಿ: 1 ಚಮಚ
- ಉಪ್ಪು: 1 ಚಮಚ
- ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
ಒಂದು ಬಟ್ಟಲಿಗೆ, ಒಂದು ಕಪ್ ಕಾರ್ನ್, ಬೇಸನ್ ಹಿಟ್ಟು, ಹಸಿರು ಮೆಣಸಿನಕಾಯಿ, ಕೆಂಪು ಮೆಣಸಿನ ಪುಡಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ಮತ್ತು ಹಿಟ್ಟು ಸ್ಥಿರವಾಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ.
ಕಲಸಿದ ಹಿಟ್ಟನ್ನು ಉಂಡೆ ಕಟ್ಟಿಕೊಂಡು ನಂತರ ಅದನ್ನು ಲಟ್ಟಿಸಿ. ಬಳಿಕ ಒಂದು ಪ್ಯಾನ್ಗೆ ಎಣ್ಣೆಯನ್ನು ಹಾಕಿಕೊಂಡು ಕಾಯಿಸಿಕೊಳ್ಳಿ.
ಅನಂತರ ಲಟ್ಟಿಸಿದ ಹಿಟ್ಟನ್ನು ಎಣ್ಣೆಯಲ್ಲಿ ಚೆನ್ನಾಗಿ ಕರೆಯಿರಿ.ಬಜ್ಜಿಯನ್ನು ಎಣ್ಣೆಯಿಂದ ತೆಗೆಯಿರಿ. ಈಗ ಬಿಸಿಬಿಸಿಯಾದ ಕಾರ್ನ್ ಬಜ್ಜಿ ತಿನ್ನಲು ಸಿದ್ಧವಾಗಿದೆ