ಸಂಸತ್ ಭವನದಲ್ಲಿ ಇವತ್ತು ದಾಳಿ ಮಾಡಿ ಬಂಧಿತರಾದವರಲ್ಲಿ ಹರಿಯಾಣ ರಾಜ್ಯದ ಹಿಸ್ಸಾರ್ ಮೂಲಕ ನೀಲಂ ಕೂಡಾ ಒಬ್ಬಾಕೆ. ಈಕೆಗೆ 42 ವರ್ಷ ವಯಸ್ಸು.
ಈಕೆ ಐದು ಪದವಿಗಳ ಪದವೀಧರೆ. ಬಿ.ಎ. ಎಂ ಎ, ಬಿ.ಎಡ್, ಎಂ.ಎಡ್, ಎಂಫಿಲ್ ಪದವಿಗಳನ್ನು ಮುಗಿಸಿರುವ ಈಕೆ ಸಿಟಿಇಟಿ ಮತ್ತು ನೆಟ್ ಪರೀಕ್ಷೆಯನ್ನೂ ಬರೆದಿದ್ದಳು. ನಿರುದ್ಯೋಗದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಳು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರೈತ ವಿರೋಧಿ ಕಾನೂನುಗಳ ವಿರುದ್ಧ ದೀರ್ಘಕಾಲ ನಡೆಸಿದ್ದ ರೈತರ ಹೋರಾಟದಲ್ಲೂ ಈಕೆ ಭಾಗವಹಿಸಿದ್ದಳು.
ಆಕೆ ದೆಹಲಿಗೆ ಹೋಗಿದ್ದಳು ಎಂದು ನಮಗೆ ಗೊತ್ತಿಲ್ಲ. ಹಿಸ್ಸಾರ್ಗೆ ಆಕೆ ಓದಲು ಹೋಗಿದ್ದಳು ಎನ್ನುವುದಷ್ಟೇ ನಮಗೆ ಗೊತ್ತಿರುವುದು. ನಿನ್ನೆ ಆಕೆ ಮನೆಗೆ ಬಂದಿದ್ದಳು ಮತ್ತು ನಿನ್ನೆಯೇ ವಾಪಸ್ ಹೋಗಿದ್ದಳು. ಆಕೆ ಬಿ.ಎ, ಎಂ ಎ, ಬಿ.ಎಡ್, ಎಂ.ಎಡ್ ಪದವಿ ಹಾಗೂ ಸಿಟಿಇಟಿ, ಎಂಎಫಿಲ್ ಮತ್ತು ನೆಟ್ನಲ್ಲೂ ಅರ್ಹತೆ ಪಡೆದಿದ್ದಳು. ಆಕೆ ನಿರುದ್ಯೋಗದ ವಿರುದ್ಧವೂ ಹಲವು ಬಾರಿ ಧ್ವನಿ ಎತ್ತಿದ್ದಳು ಮತ್ತು ಆಕೆ ರೈತರ ಹೋರಾಟದಲ್ಲೂ ಭಾಗಿಯಾಗಿದ್ದಳು
ಎಂದು ನೀಲಂ ಸಹೋದರ ಹೇಳಿದ್ದಾರೆ.