ಅಡುಗೆ ಮನೆಯಲ್ಲಿ ಶುಚಿತ್ವವು ತುಂಬಾ ಮಹತ್ವದ್ದಾಗಿದ್ದು, ಪ್ರತಿಯೊಬ್ಬರು ಅಡುಗೆ ಮನೆಯನ್ನು ಶುಚಿಯಾಗಿಡಲು ಪ್ರಯತ್ನಿಸುವರು. ಅಡುಗೆ ಮನೆಯಲ್ಲಿ ಇರುವಂತಹ ಸಿಂಕ್ ನಲ್ಲಿ ಹಲವಾರು ಬಗೆಯ ಪಾತ್ರೆಗಳು, ಪದಾರ್ಥಗಳು ಬಿದ್ದಿರುವುದು.
ಹೀಗಾಗಿ ಸಿಂಕ್ ನ್ನು ನಿತ್ಯವೂ ಶುಚಿ ಮಾಡುವುದು ಅಗತ್ಯ. ಕೆಲವೊಂದು ಸಲ ರಾಸಾಯನಿಕವಿರುವ ಉತ್ಪನ್ನಗಳನ್ನು ಬಳಸಿಕೊಂಡು ಸಿಂಕ್ ನ್ನು ತೊಳೆಯಲಾಗುತ್ತದೆ. ಆದರೆ ಇದು ಸರಿಯಾದ ಕ್ರಮವಲ್ಲ ಮತ್ತು ಇದರಿಂದ ಆರೋಗ್ಯದ ಮೇಲೆ ಕೂಡ ಪರಿಣಾಮವಾಗಬಹುದು. ಇದರ ಬದಲಿಗೆ ಸಿಂಕ್ ನ್ನು ಶುಚಿಯಾಗಿಡಲು ನೈಸರ್ಗಿಕವಾಗಿ ಏನು ಮಾಡಬಹುದು ಎಂದು ತಿಳಿಯಿರಿ.
ಬಿಸಿ ನೀರು ಮತ್ತು ಬ್ಲೀಚಿಂಗ್ ಹುಡಿ
ಸಿಂಕ್ ನಲ್ಲಿ ಅಂಟಿಕೊಂಡಿರುವಂತಹ ಎಣ್ಣೆಯಂತಹ ಜಿಡ್ಡಿನ ಪದಾರ್ಥಗಳನ್ನು ದೂರ ಮಾಡಲು ಬಿಸಿ ನೀರು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಹೀಗಾಗಿ ಸಿಂಕ್ ಗೆ ಬಿಸಿ ನೀರು ಹಾಕಿದರೆ ಒಳ್ಳೆಯದು. ಸ್ವಲ್ಪ ಬ್ಲೀಚಿಂಗ್ ಹುಡಿ ಹಾಕಿಕೊಂಡು ಬಳಿಕ ಬಿಸಿ ನೀರು ಹಾಕಿ.
ವಿನೇಗರ್ ಮತ್ತು ಲಿಂಬೆ
ಸಿಂಕ್ ನ್ನು ತುಂಬಾ ಆಳವಾಗಿ ಶುಚಿ ಮಾಡಬೇಕಿದ್ದರೆ, ಆಗ ನೀವು ವಿನೇಗರ್ ಮತ್ತು ಲಿಂಬೆರಸವನ್ನು ಬಳಸಬೇಕು. ಲಿಂಬೆ ಮತ್ತು ವಿನೇಗರ್ ನಲ್ಲಿ ನೈಸರ್ಗಿಕ ಆಮ್ಲವಿದ್ದು, ಇದು ಸಿಂಗ್ ನ್ನು ಶುಚಿ ಮಾಡುವುದು ಮತ್ತು ವಾಸನೆ ದೂರ ಮಾಡುವುದು.
ಲಿಂಬೆ ರಸ ಮತ್ತು ವಿನೇಗರ್ ನ ಮಿಶ್ರಣವನ್ನು ಸಿಂಕ್ ಗೆ ಹಾಕಬೇಕು. ಅರ್ಧ ಗಂಟೆ ಕಾಲ ಹಾಗೆ ಬಿಡಿ ಮತ್ತು ಇದರ ಬಳಿಕ ನೀರು ಹಾಕಿದರೆ ಶುಚಿಯಾಗುವುದು.
ಅಡುಗೆ ಸೋಡಾ
ಅಡುಗೆ ಸೋಡಾವು ಸಿಂಕ್ ನ್ನು ಶುಚಿ ಮಾಡಲು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಇದು ಸಿಂಕ್ ಬ್ಲಾಕ್ ಆಗಿದ್ದರೆ, ಅದನ್ನು ತೆರೆಯುವುದು.
ಸಿಂಕ್ ನ ಮೇಲೆ ಈ ಹುಡಿಯನ್ನು ಹಾಕಿ ಮತ್ತು ಹಾಗೆ ಸ್ವಲ್ಪ ಸಮಯ ಬಿಡಿ ಮತ್ತು ಇದರ ಬಳಿಕ ತೊಳೆದರೆ, ಆಗ ಸಿಂಕ್ ಹೊಸದರಂತೆ ಕಾಣುವುದು. ಅಡುಗೆ ಸೋಡಾವನ್ನು ವಿವಿಧ ರೀತಿಯಿಂದ ಶುಚಿ ಮಾಡಲು ಬಳಸಬಹುದು.
ಬೇವಿನ ಎಲೆ
ಬೇವಿನ ಎಲೆಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇದ್ದು, ಸ್ವಲ್ಪ ಬೇವಿನ ಎಲೆಗಳನ್ನು ನೀರಿಗೆ ಹಾಕಿ ಕುದಿಸಬೇಕು ಈ ನೀರನ್ನು ಹಾಗೆ ಸಿಂಕ್ ನ ಒಳಗೆ ಹಾಕಿ. ಇದರ ಬಳಿಕ ಸೋಪ್ ವಾಟರ್ ಬಳಸಿಕೊಂಡು ಸಿಂಕ್ ನ್ನು ಸ್ಕ್ರಬ್ ಮಾಡಿದರೆ, ಅದರಿಂದ ಸಿಂಕ್ ಶುಚಿಯಾಗುವುದು.