ಸಂಸತ್ ಕಲಾಪ ನಡೆಯುತ್ತಿದ್ದ ವೇಳೆ ದಾಂಧಲೆ ನಡೆಸಿದ ಆರೋಪಿಗಳ ತನಿಖೆ ಚುರುಕುಗೊಂಡಿದೆ. ಆರೋಪಿಗಳಾದ ಮನೋರಂಜನ್, ಸಾಗರ್ ಶರ್ಮಾ ಕುರಿತಾಗಿ ತನಿಖಾಧಿಕಾರಿಗಳು ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮನೋರಂಜನ್ನ ಮೈಸೂರು ನಿವಾಸಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಬೇಹುಗಾರಿಕಾ ಅಧಿಕಾರಿಗಳು ಮನೋರಂಜನ್ನ ತಂದೆ ದೇವರಾಜೇ ಗೌಡ ಹಾಗೂ ತಾಯಿ ಶೈಲಜಾರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಈಗಾಗಲೇ ಮನೋರಂಜನ್, ಸಾಗರ್ ಶರ್ಮಾ ಸೇರಿದಂತೆ ಮತ್ತಿಬ್ಬರು ಆರೋಪಿಗಳ ವಿರುದ್ಧ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮನೋರಂಜನ್ನ ಮನೆಗೆ ಸಾಗರ್ ಶರ್ಮಾ ಎರಡು ಬಾರಿ ಭೇಟಿ ನೀಡಿ, ತಮ್ಮೊಂದಿಗೆ ಮತನಾಡಿ ಊಟವನ್ನೂ ಮಾಡಿದ್ದ ಅಂತ ಮನೋರಂಜನ್ ಪೋಷಕರು ಮಾಹಿತಿ ನೀಡಿದ್ದಾರೆ.
ಮನೋರಂಜನ್ ಮನೆಯ ನೆರೆ ಹೊರೆಯ ಮನೆಯವರು, ಆತ ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ, ಸಮೀಪದ ಪಾರ್ಕ್ನಲ್ಲಿ ಕಾಲ ಕಳೆಯುತ್ತಿದ್ದ. ಮೊಬೈಲ್ನಲ್ಲಿ ಮುಳುಗಿರುತ್ತಿದ್ದ ಮಾಹಿತಿ ನೀಡಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಮನೋರಂಜನ್ ಮನೆ ಅಷ್ಟೇ ಅಲ್ಲ, ಮನೋರಂಜನ್ಗೆ ಸಂಸತ್ ಪ್ರವೇಶಕ್ಕೆ ಪಾಸ್ ನೀಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಮನೆ ಹಾಗೂ ಕಚೇರಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ.