ಚಳಿಗಾಲ ಮತ್ತು ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೋಳಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿ ಮೊಟ್ಟೆಯ ರೇಟು ದುಬಾರಿಯಾಗಿದೆ.
ಹೋಲ್ ಸೇಲ್ ದರದಲ್ಲಿ ಪ್ರತಿ ಮೊಟ್ಟಗೆ 5.90 ರಿಂದ 6 ರೂ.ವರೆಗೆ ಇದ್ದರೆ, ಚಿಲ್ಲರೆ ದರದಲ್ಲಿ 7 ರೂ.ಗೆ ಏರಿಕೆಯಾಗಿದೆ. ಕೋಳಿ ಸಾಕಾಣಿಕೆಗೆ ಬಳಸಲ್ಪಡುವ ವಸ್ತುಗಳು ಮತ್ತು ಆಹಾರ ಪದಾರ್ಥಗಳು ದುಬಾರಿಯಾಗಿರೋದ್ರಿಂದ ಸಹಜವಾಗಿಯೇ ಮೊಟ್ಟೆ ಉತ್ಪಾದನೆ ವೆಚ್ಚವೂ ಕೂಡ ದುಬಾರಿಯಾಗಿದೆ.
ಇನ್ನು ಜನವರಿ ವರೆಗೆ ಬೆಲೆ ಏರಿಕೆ ಮುಂದುವರಿಯಲಿದ್ದು, ಬೆಂಗಳೂರು, ಹೈದರಾಬಾದ್,ತಮಿಳುನಾಡು ಮಾರುಕಟ್ಟೆ ಸೇರಿದಂತೆ ದೇಶಾದ್ಯಂತ ಇದೇ ಸ್ಥಿತಿ ಇದೆ. ಇನ್ನು ಈ ಬಾರಿ ಮಳೆಯಿಂದಾಗಿ ಕೋಳಿಗಳ ಪ್ರಮುಖ ಆಹಾರ ಕಡ್ಲೆಕಾಯಿ, ಅಕ್ಕಿತೌಡು, ಸೂರ್ಯಕಾಂತಿ ಹಿಂಡಿ ಬೆಲೆ ಏರಿಕೆಯಾಗಿದೆ. ಜೋಳದ ಇಳುವರಿ ಕಡಿಮೆಯಾಗಿ ಜೋಳದ ದರ ಕೂಡ ಹೆಚ್ಚಾಗಿದೆ. ಈ ಎಲ್ಲಾ ಅಂಶಗಳಿಂದಾಗಿ ಕೋಳಿ ಮೊಟ್ಟೆ ದರ ಹೆಚ್ಚಾಗಿದೆ.