ಡಿ.13ರ ಸಂಸತ್ ಭದ್ರತಾಲೋಪ ಕುರಿತಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ಕಿಡಿ ಕಾರಿದ್ದಾರೆ.
ಭಾರೀ ಭದ್ರತೆಯ ನಡುವೆಯೂ ಸಂಸತ್ ನಲ್ಲಿ ಉಂಟಾದ ಭದ್ರತಾಲೋಪ ತೀವ್ರ ಗಂಭೀರವಾದ ವಿಚಾರ, ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ ಎಂದಿರು ಖರ್ಗೆ, ಈ ಕುರಿತು ಗೃಹ ಸಚಿವ ಅಮಿತ್ ಶಾರವರು ಸಂಸತ್ ನಲ್ಲಿ ಹೇಳಿಕೆ ನೀಡಲು ಒತ್ತಡ ಹೇರುತ್ತಿದ್ದೇವೆ. ಅಮಿತ್ ಶಾರವರಿಗೆ ಘಟನೆ ಕುರಿತಾಗಿ, ಮತ್ತದರ ವಾಸ್ತವತೆಯ ಕುರಿತಾಗಿ ಮಾತನಾಡುವ ಇಚ್ಛೆ ಇದ್ದಂತಿಲ್ಲ.
ಆದರೆ ಇದೇ ಅಮಿತ್ ಶಾ, ಟಿವಿ ಸಂದರ್ಶನದಲ್ಲಿ ಗಂಟೆಗಟಲೆ ಕುಳಿತು ಮಾತನಾಡುತ್ತಾರೆ. ಅಮಿತ್ ಶಾರವರ ಈ ನಡೆ ಒಳ್ಳೆಯದಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಇಂಥಹವರಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಅಂತ ಖರ್ಗೆ ಕಿಡಿ ಕಾರಿದ್ದಾರೆ. ಅಲ್ಲದೆ ಬಿಜೆಪಿ ಮತ್ತು ಅಮಿತ್ ಶಾ ಕೇವಲ ಮತಕ್ಕಾಗಿ ದೇಶದ ಪ್ರಥಮ ಪ್ರಧಾನಮಂತ್ರಿ ನೆಹರೂ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಅಪಹಾಸ್ಯ ಮಾಡುತ್ತಾರೆ ಅಂತ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.