ಬೆಂಗಳೂರು: ಭಾರತೀಯ ನೌಕಾ ಸೇನೆಯಲ್ಲಿ ಖಾಲಿ ಇರುವ 910 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಟ್ರೇಡ್ಸ್ಮ್ಯಾನ್ ಮತ್ತು ಹಿರಿಯ ಡ್ರಾಫ್ಟ್ಮ್ಯಾನ್ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ದೇಶಾದ್ಯಂತ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ ಇಂತಿದೆ.
ಹುದ್ದೆ ವಿವರ: ಭಾರತೀಯ ನೌಕಾ ಸೇನೆಯಲ್ಲಿ ಖಾಲಿ ಇರುವ 910 ವಿವಿಧ ಹುದ್ದೆ ಮಾಹಿತಿ ಇಂತಿದೆ.
ಚಾರ್ಜ್ಮ್ಯಾನ್ (ಮದ್ದುಗುಂಡುಗಳ ಕಾರ್ಯಾಗಾರ) 22
ಚಾರ್ಜ್ಮ್ಯಾನ್ (ಫ್ಯಾಕ್ಟರಿ) 20
ಹಿರಿಯ ಡ್ರಾಫ್ಟ್ಮ್ಯಾನ್ (ಎಲೆಕ್ಟ್ರಿಕಲ್) 142
ಹಿರಿಯ ಡ್ರಾಫ್ಟ್ಮ್ಯಾನ್ (ಮೆಕ್ಯಾನಿಕಲ್) 26
ಹಿರಿಯ ಡ್ರಾಫ್ಟ್ಮ್ಯಾನ್ (ನಿರ್ಮಾಣ) 29
ಹಿರಿಯ ಡ್ರಾಫ್ಟ್ಮ್ಯಾನ್ (ಕಾರ್ಟೊಗ್ರಾಫಿಕ್) 11
ಹಿರಿಯ ಡ್ರಾಫ್ಟ್ಮ್ಯಾನ್ (ಶಸ್ತ್ರಾಸ್ತ್ರ) 50
ವ್ಯಾಪಾರಿ (ಪೂರ್ವ ನೌಕಾ ಕಮಾಂಡ್) 9
ಟ್ರೇಡ್ಸ್ಮ್ಯಾನ್ (ಪಶ್ಚಿಮ ನೌಕಾ ಕಮಾಂಡ್) 565
ವ್ಯಾಪಾರಿ (ದಕ್ಷಿಣ ನೌಕಾ ಕಮಾಂಡ್) 36
ವಿದ್ಯಾರ್ಹತೆ: ಚಾರ್ಜ್ಮ್ಯಾನ್ ಹುದ್ದೆಗಳಿಗೆ ಅಭ್ಯರ್ಥಿಗಳು ಕೆಮಿಕಲ್ ಇಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. ಹಿರಿಯ ಡ್ರಾಫ್ಟ್ಮ್ಯಾನ್ ಹುದ್ದೆ ಮತ್ತು ಟ್ರೇಡ್ಸ್ಮ್ಯಾನ್ ಹುದ್ದೆಗೆ ಅಭ್ಯರ್ಥಿ 10ನೇ ತರಗತಿ, ಡಿಪ್ಲೊಮಾ, ಐಟಿಐ ಪೂರ್ಣಗೊಳಿಸಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 25 ವರ್ಷ ಪೂರ್ಣಗೊಳಿಸಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನ ಅಭ್ಯರ್ಥಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಇತರೆ ಅಭ್ಯರ್ಥಿಗಳಿಗೆ 295 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಡಿಸೆಂಬರ್ 18 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್ 31 ಆಗಿದೆ.
ಈ ಹುದ್ದೆ ಕುರಿತ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಅಗತ್ಯ ಮಾಹಿತಿಗಳಿಗೆ ಅಭ್ಯರ್ಥಿಗಳುjoinindiannavy.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.