ತನ್ನ ಸಹೋದರನ ಪ್ರಾಣ ಉಳಿಸಲು ಕಿಡ್ನಿ ದಾನ ಮಾಡಿದ ಪತ್ನಿಗೆ ಪತಿ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರಪ್ರದೇಶದಲ್ಲಿ ವರದಿಯಾಗಿದೆ.
ಕಿಡ್ನಿ ಸಮಸ್ಯೆಯಿಂದಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಸಹೋದರನಿಗೆ ತನ್ನ ಕಿಡ್ನಿ ದಾನ ಮಾಡಿದ್ದಾಗಿ ಉತ್ತರಪ್ರದೇಶದ ಮಹಿಳೆಯೊಬ್ಬಳು ದೂರದ ಸೌದಿ ಅರೇಬಿಯಾದಲ್ಲಿ ವಾಸವಿದ್ದ ತನ್ನ ಪತಿಗೆ ಕರೆ ಮಾಡಿ ತಿಳಿಸುತ್ತಾಳೆ. ಸುದ್ದಿ ತಿಳಿದು ಕುಪಿತಗೊಂಡ ಪತಿ ಮರುಕ್ಷಣವೇ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನೆ.
ದೇಶದಲ್ಲಿ ತ್ರಿವಳಿ ತಲಾಖ್ ಕಾನೂನುಬಾಹಿರ ಮತ್ತು ಈ ಅಪರಾಧವೆಸಗಿದರೆ 3 ವರ್ಷ ಜೈಲು ಶಿಕ್ಷೆ ಅಂತ ಸುಪ್ರೀಂ ತೀರ್ಪು ಪ್ರಕಟಿಸಿದ ಹೊರತಾಗಿಯೂ ದೇಶಾದ್ಯಂತ ಇಂತಹ ಘಟನೆಗಳು ವರದಿಯಾಗುತ್ತಿವೆ. ಇನ್ನು ಘಟನೆ ಕುರಿತಾಗಿ ಮಹಿಳೆಯು ಪೊಲೀಸ್ ಠಾಣೆಯಲ್ಲಿ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ.