ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ, ಅದರಲ್ಲೂ ಬಡವರಿಗೆ ನೆರವಾಗುವ ರೀತಿಯಲ್ಲಿ ಊಟ-ತಿಂಡಿ ಒದಗಿಸುವ ಗುರಿಯೊಂದಿಗೆ ಸಿದ್ದರಾಮಯ್ಯ ಸರ್ಕಾರ ಅನುಷ್ಠಾನಗೊಳಿಸಿದ್ದ ಇಂದಿರಾ ಕ್ಯಾಂಟೀನ್ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಸದ್ದಿಲ್ಲದೆ ಮುಚ್ಚಿಹೋಗಿದ್ವು. ಆದ್ರೀಗ ಇದೇ ಇಂದಿರಾ ಕ್ಯಾಂಟೀನ್ ನ ಮೆನು, ಯಾವ ರೆಸ್ಟೋರೆಂಟ್ ಗೂ ಕಮ್ಮಿ ಇಲ್ಲದಂತಿದೆ.
ಗ್ರಾಹಕರು ಕ್ಯಾಂಟೀನ್ ಗೆ ಬರ್ತಿಲ್ಲ ಅಂತ ಅನುದಾನವನ್ನೇ ರಿಲೀಸ್ ಮಾಡದ ಆಗಿನ ಬಿಜೆಪಿ ಸರ್ಕಾರ ಕಾಂಗ್ರೆಸ್ ನ ಈ ಮಹಾತ್ವಾಕಾಂಕ್ಷಿ ಯೋಜನೆಯನ್ನ ಸಮಾಧಿ ಮಾಡಿತ್ತು. ಇಂದಿರಾ ಕ್ಯಾಂಟೀನ್ ಹೆಸರು ಕೇಳಿದ್ರೆ ಬಿಜೆಪಿಯವರಿಗೆ ಕಿವಿಯೊಳಗೆ ಇರುವೆ ಬಿಟ್ಟಂಗೆ ಆಗ್ತಿತ್ತು ಅನ್ಸುತ್ತೆ. ಹೀಗಾಗಿ ದಿನನಿತ್ಯ ಸಾವಿರಾರು ಮಂದಿಯ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಗಳಿಗೆ ಬೀಗ ಜಡಿದಿತ್ತು ಬಿಜೆಪಿ ಸರ್ಕಾರ.
ಸದ್ಯ ಸಿದ್ದರಾಮಯ್ಯ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಇಂದಿರಾ ಕ್ಯಾಂಟೀನ್ ಗಳಿಗೆ ಮರುಜೀವ ಕೊಟ್ಟರು. ಅಷ್ಟೇ ಅಲ್ಲ, ಎಲ್ಲಾ ಕ್ಯಾಂಟೀನ್ ಗಳಿಗೆ ಹೊಸ ರೂಪ ನೀಡಿದ್ದಾರೆ. ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ ಸಾಂಬಾರ್, ಇಡ್ಲಿ ಚಟ್ನಿ, ವೆಜ್ ಪುಲಾವ್ ರಾಯಿತಾ, ಬಿಸಿಬೇಳೆ ಬಾತ್-ಬೂಂದಿ, ಖಾರಾಬಾತ್- ಚಟ್ನಿ, ಪೊಂಗಲ್ ಚಟ್ನಿ, ಕೇಸರಿಬಾತ್, ಬ್ರೇಡ್ ಜಾಮ್, ಮಂಗಳೂರು ಬನ್ಸ್, ಬನ್ಸ್ ಸಿಗುತ್ತೆ. ಈ ಎಲ್ಲಾ ಬೆಳಗಿನ ತಿಂಡಿ ಪ್ರತಿ ಪ್ಲೇಟ್ ಗೆ ಕೇವಲ 5 ರೂಪಾಯಿ ಮಾತ್ರ.
ಹಾಗೇನೇ ಮಧ್ಯಾಹ್ನದ ಊಟಕ್ಕೆ ಅನ್ನ-ತರಕಾರಿ ಸಾಂಬಾರ್-ಖೀರು, ಅನ್ನ, ತರಕಾರಿ ಸಾಂಬಾರ್, ರಾಯಿತಾ, ಅನ್ನ-ತರಕಾರಿ ಸಾರು ಮೊಸರನ್ನ, ರಾಗಿ ಮುದ್ದೆ – ಸೊಪ್ಪಿನ ಸಾರು ಖೀರು, ಚಪಾತಿ ಸಾಗು, ಖೀರು ಸಿಗುತ್ತೆ. ಪ್ರತಿ ಪ್ಲೇಟ್ ಊಟಕ್ಕೆ ಬರೀ ಹತ್ತೇ ರೂಪಾಯಿ.
ಇನ್ನು 10 ರೂಪಾಯಿಗೆ ರಾತ್ರಿ ಊಟಕ್ಕೆ ಅನ್ನ, ತರಕಾರಿ ಸಾರು, ರಾಯಿತಾ, ರಾಗಿ ಮುದ್ದೆ, ಚಪಾತಿ ವೆಜ್ ಗ್ರೇವಿ ಸಿಗುತ್ತೆ. ಇಷ್ಟೇ ಅಲ್ಲ, ಮಾವಿನಕಾಯಿ ಸೀಸನ್ ನಲ್ಲಿ ಮಾವಿನಕಾಯಿ ಚಿತ್ರಾನ್ನ ಕೂಡ ಸಿಗುತ್ತೆ.