ಒಂದು ಭಾರತ ದ ನಕಾಶೆಯಾದ್ರೆ ಮತ್ತೊಂದು ಶ್ರೀಲಂಕಾ ಆಗಿರುತ್ತೆ. ಏನ್ ಬೇಕಾದ್ರೂ ಮಾಡ್ಬಹುದು ದುಂಡಗಿರುವ ಚಪಾತಿ ಮಾಡೋದು ಕಷ್ಟ ಎನ್ನುವ ಮಹಿಳೆಯರಿದ್ದಾರೆ. ಕೆಲ ಮಹಿಳೆಯರು ಅಡುಗೆಯಲ್ಲಿ ಎಕ್ಸ್ಪರ್ಟ್ ಇರ್ತಾರೆ. ಫಟಾ ಫಟ್ ಅಂತಾ ದುಂಡಗಿರುವ ಚಪಾತಿ ಮಾಡಿರ್ತಾರೆ. ಮತ್ತೆ ಕೆಲ ಮಹಿಳೆಯರಿಗೆ ಏನು ಮಾಡಿದ್ರೂ ದುಂಡನೇಯ ಚಪಾತಿ ಬರೋದಿಲ್ಲ. ಅಷ್ಟೇ ಅಲ್ಲ, ಚಪಾ ವಿಪರೀತ ಗಟ್ಟಿಯಾಗಿರುತ್ತದೆ ಇಲ್ಲವೆ ಮೆದುವಾಗಿರುತ್ತದೆ. ಎರಡನ್ನೂ ಸೇವನೆ ಮಾಡೋದು ಕಷ್ಟ. ಹಾಗೆಯೇ ಕೆಲ ಮಹಿಳೆಯರು ಮಾಡುವ ಚಪಾತಿ ಉಬ್ಬಿ ಬರೋದಿಲ್ಲ. ಅದರಲ್ಲಿ ಬರೀ ನಿಮ್ಮ ತಪ್ಪು ಮಾತ್ರ ಇರೋದಿಲ್ಲ, ನೀವು ಚಪಾತಿ ಹಿಟ್ಟನ್ನು ಹೇಗೆ ಕಲಸಿದ್ದೀರಿ ಎಂಬುದು ಕೂಡ ಮಹತ್ವ ಪಡೆಯುತ್ತದೆ. ಚಪಾತಿ ಹಿಟ್ಟನ್ನು ಸಿದ್ಧ ಮಾಡುವಾಗ ನೀವು ಕೆಲವು ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆಗ ಮಾತ್ರ ದುಂಡಗಿರುವ, ಉಬ್ಬಿದ ಚಪಾತಿ ತಯಾರಿಸಲು ಸಾಧ್ಯ.
ಹಾಗಿದ್ದರೆ ಮೃದುವಾಗಿ ಹೇಗೆ ಚಪಾತಿ ಮಾಡೋದು ಹೇಗೆ ಅಂತೀರಾ…? ಇಲ್ಲಿದೆ ನೋಡಿ ಟಿಪ್ಸ್
ಬೆಚ್ಚಗಿನ ನೀರನ್ನು ಬಳಸಿ
ನೀವು ಚಪಾತಿಗೆ ಹಿಟ್ಟನ್ನು ಕಲಸುವಾಗ ಬೆಚ್ಚಗಿನ ನೀರನ್ನು ಬಳಸಬೇಕು. ಬಿಸಿ ನೀರಿನಲ್ಲಿ ಹಿಟ್ಟು ಕಲಸುವುದರಿಂದ ಚಪಾತಿ ತುಂಬಾನೇ ಮೃದುವಾಗಿರುತ್ತದೆ.
ಚೆನ್ನಾಗಿ ಬೆರೆಸಿಕೊಳ್ಳಿ
ಹಿಟ್ಟನ್ನು ಬೆರೆಸುವಾಗ, ಆತುರಪಡಬೇಡಿ. ಹಿಟ್ಟನ್ನು ಬೆರೆಸಲು ಯಾವಾಗಲೂ ಸಮಯವನ್ನು ನೀಡಿ. ಹಿಟ್ಟು ಗಟ್ಟಿಯಾಗಿರದಂತೆ ನೋಡಿಕೊಳ್ಳಿ. ಅದನ್ನು ರೋಲಿಂಗ್ ಮಾಡುವಾಗ ಸುಲಭವಾಗಿರಬೇಕು. ಹಿಟ್ಟು ನಿಮ್ಮ ಕೈಗೆ ಅಂಟಿಕೊಳ್ಳುವಂತೆ ಇರಬಾರದು.
20 ನಿಮಿಷಗಳ ಕಾಲ ಇಡಿ
ಹಿಟ್ಟನ್ನು ಬೆರೆಸಿದ ನಂತರ, ಅದನ್ನು ಒದ್ದೆಯಾದ ಮಸ್ಲಿನ್ ಬಟ್ಟೆಯಿಂದ ಮುಚ್ಚಿ ಕನಿಷ್ಠ 20 ನಿಮಿಷಗಳ ಕಾಲ ಬಿಡಿ. ಹಿಟ್ಟನ್ನು ಸರಿಯಾಗಿ ಕಲಸಿ ಸ್ವಲ್ಪ ಹೊತ್ತು ಇಟ್ಟರೆ ಹಿಟ್ಟು ತುಂಬಾನೇ ಮೃದುವಾಗಿರುತ್ತದೆ.
ಲಟ್ಟಿಸುವ ಮುನ್ನ ಒಂದು ನಿಮಿಷ ಬೆರೆಸಿಕೊಳ್ಳಿ
ಚಪಾತಿಯನ್ನು ಲಟ್ಟಿಸುವ ಮೊದಲು ನೀವು ಕನಿಷ್ಟ 1 ನಿಮಿಷ ಹಿಟ್ಟನ್ನು ಮತ್ತೆ ಕಲಸಬೇಕು. ಇದರಿಂದ ಧಾನ್ಯದ ಕಣಗಳು ಸಕ್ರಿಯಗೊಳ್ಳುತ್ತವೆ ಮತ್ತು ನಿಮ್ಮ ರೊಟ್ಟಿಗಳು ಮೃದುವಾಗಿ ಹೊರಹೊಮ್ಮುತ್ತವೆ, ಅದನ್ನು ನೀವು ಕೇವಲ ಮೂರು ಬೆರಳುಗಳಿಂದ ಮುರಿಯಬಹುದು.