ಬಿಜೆಪಿಯಲ್ಲಿದ್ದುಕೊಂಡು ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕಾಂಗ್ರೆಸ್ನಲ್ಲಿದ್ದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ವಾಗ್ದಾಳಿ ನಡೆಸುತ್ತಿರುವ ಬಿ ಕೆ ಹರಿಪ್ರಸಾದ್ ಇಬ್ಬರೂ ಸೇರಿಕೊಂಡು ಹೊಸ ಪಕ್ಷ ರಚಿಸುವುದು ಒಳ್ಳೆಯದು ಎಂದು ಮಾಜಿ ಸಚಿವ, ಬಿಜೆಪಿ ನಾಯಕ ಬಿ ಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.
ವಿಕೃತ ಮನಸ್ಸುಗಳನ್ನು ಹೊಂದಿರುವಂತಹ ಬಿಕೆ ಹರಿಪ್ರಸಾದ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರು ಸೇರಿ ಒಂದು ಪಕ್ಷವನ್ನು ಪ್ರಾರಂಭಿಸುದು ಒಳ್ಳೆಯದು ಅಂತ ನನ್ನ ಭಾವನೆ
ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ನಾನು ಬಸವನಗೌಡ ಪಾಟೀಲ್ ಅಂದರೆ ಬಿಸಿ ಪಾಟೀಲ್. ಏನು ಪಾಟೀಲ್ ಅವರೇ, ನೀವು ಈ ರೀತಿ ಹೇಳಿಕೆ ಕೊಡುವುದು ಸರಿನಾ ನೀವು ಈ ರೀತಿ ಹೇಳಿಕೆ ಕೊಡುವುದು ನೋಡಿದರೆ ನೀವು ಬಿಜೆಪಿ ಪರವಾಗಿರುವಿರೋ ಅಥವಾ ಕಾಂಗ್ರೆಸ್ ಪರವಾಗಿರುವಿರೋ ಎನ್ನುವುದು ಅನುಮಾನ. ವಿಷಯ ತಿಳಿದುಕೊಂಡು ಮಾತಾಡುವುದು ಬಹಳ ಒಳ್ಳೆಯದು.
ಎಂದು ಟ್ವೀಟಿಸಿದ್ದಾರೆ.
ADVERTISEMENT
ADVERTISEMENT