ಮಾಜಿ ಪ್ರಧಾನಿ ದೇವೇಗೌಡ ಅವರ ಮನೆ ಮುಂದೆ ತಮ್ಮ ವಾಹನ ನಿಲ್ಲಿಸಿದ್ದಕ್ಕೆ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ಸಿಟ್ಟಾಗಿದ್ದಾರೆ.
ಹೊಳೆನರಸೀಪುರ ತಾಲೂಕಿನ ಹಳೇಕೋಟೆಯಲ್ಲಿ ವಿಕಸಿತ ಭಾರತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ವಾಹನವನ್ನು ದೇವೇಗೌಡರ ಮನೆ ಮುಂದೆ ನಿಲ್ಲಿಸಲಾಯಿತು.
ಹರದನಹಳ್ಳಿಯಲ್ಲಿರುವ ಮನೆ ಎದುರು ಕೇಂದ್ರ ಸಚಿವರ ವಾಹನ ನಿಂತಿದ್ದನ್ನು ಗಮನಿಸಿದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಸಚಿವರಿಗೆ ಹಾರ ಹಾಕಿ ಸನ್ಮಾನ ಮಾಡಿದರು.
ನಂತರ ಕಾರ್ಯಕ್ರಮಕ್ಕೆ ತೆರಳುವ ವೇಳೆ ಮಾರ್ಗಮಧ್ಯೆಯಲ್ಲಿ ವಾಹನವನ್ನು ಯಾಕೆ ನಿಲ್ಲಿಸಿದ್ರಿ ಎಂದು ಸಿಟ್ಟಾದ ನಿಮ್ಮನ್ನು ಅಲ್ಲಿ ವಾಹನ ನಿಲ್ಲಿಸಲು ಹೇಳಿದ್ದು ಯಾರು..? ನನ್ನ ಸಮಯ ಹಾಳು ಮಾಡ್ಬೇಡಿ ಎಂದು ಕಿಡಿಕಾರಿದರು. ಬೆಂಗಾವಲು ಪೊಲೀಸರ ಹೆಸರು ಬರೆದುಕೊಳ್ಳುವಂತೆ ಆಪ್ತ ಸಹಾಯಕರಿಗೆ ಸಚಿವರು ಸೂಚಿಸಿದರು.
ADVERTISEMENT
ADVERTISEMENT