ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಚಾಲಕರಿಗೆ 6 ತಿಂಗಳವರೆಗೆ ಚಾಲನೆಯಿಂದಲೇ (Driving) ನಿಷೇಧ ಹೇರಲಾಗಿದೆ.
ಬೆಂಗಳೂರು ಸಂಚಾರಿ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ 2023ರ ವರ್ಷದಲ್ಲಿ ಇಂತಹ 771 ಮಂದಿ ಚಾಲಕರಿಗೆ 6 ತಿಂಗಳವರೆಗೆ ಚಾಲನೆಯಿಂದಲೇ ನಿರ್ಬಂಧ ಹೇರಲಾಗಿದೆ.
ಸಂಚಾರಿ ಪೊಲೀಸರ ಮಾಹಿತಿಯ ಪ್ರಕಾರ ಕಳೆದ ವರ್ಷ 2,974 ಮಂದಿ ಚಾಲಕರು ಭೀಕರ ಅಪಘಾತಕ್ಕೆ ಕಾರಣರಾಗಿದ್ದಾರೆ ಮತ್ತು ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಸಂಚಾರಿ ಪೊಲೀಸರು ಆ ಮಾಹಿತಿಯನ್ನು ಸಾರಿಗೆ ಇಲಾಖೆಗೆ ರವಾನಿಸಿದ್ದಾರೆ. ಇವರಲ್ಲಿ ಈಗಾಗಲೇ 771 ಮಂದಿ ಚಾಲಕರನ್ನು 6 ತಿಂಗಳ ಮಟ್ಟಿಗೆ ಡ್ರೈವಿಂಗ್ ಮಾಡದಂತೆ ನಿರ್ಬಂಧ ಹೇರಲಾಗಿದೆ. ಉಳಿದ 2,263 ಮಂದಿ ಮೇಲೆ ನಿಷೇಧ ಹೇರುವ ಪ್ರಕ್ರಿಯೆ ಜಾರಿಯಲ್ಲಿದೆ.
ಮೋಟಾರು ವಾಹನ ಕಾಯ್ದೆಯ ಪ್ರಕಾರ ಒಂದು ವೇಳೆ ಚಾಲಕರು ಮೂರು ಬಾರಿ ಪದೇ ಪದೇ ಸಂಚಾರಿ ನಿಯಮ ಉಲ್ಲಂಘಿಸಿದರೆ ಅವರ ಚಾಲನಾ ಪರವಾನಗಿಯನ್ನು 6 ತಿಂಗಳವರೆಗೆ ಅಮಾನತಿನಲ್ಲಿಡಬಹುದು. ಒಂದು ವೇಳೆ ಮೂರಕ್ಕಿಂತ ಹೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದರೆ ಆಗ ಚಾಲನಾ ಪರವಾನಗಿಯನ್ನು ರದ್ದುಪಡಿಸಬಹುದು.
ADVERTISEMENT
ADVERTISEMENT