ಕಳೆದ 40 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದು, ಯಾವ ಬ್ಲಾಕ್ಮೇಲ್ ಗೂ ನಾನು ಹೆದರೋದಿಲ್ಲ ಅಂತ ಬಿಜೆಪಿ ಮುಖಂಡ ದೇವರಾಜೇಗೌಡಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಕೆಲವರು ರಾಜಕೀಯವಾಗಿ ನನ್ನನ್ನು ಮುಗಿಸಲು ಸಂಚು ಮಾಡುತ್ತಿದ್ದಾರೆ. ಬೇರೆಯವರಿಗೆ ಏನು ಬೇಕಾದರೂ ಬ್ಲಾಕ್ಮೇಲ್ ಮಾಡಿಕೊಳ್ಳಲಿ. ಕೆಲವರ ಮಾತಿಗೆ ನಾನು ಉತ್ತರ ಕೊಡಲ್ಲ, ಬ್ಲಾಕ್ಮೇಲ್ಗೆ ಹೆದರಲ್ಲ. ಆರೋಪಗಳು, ಅಪಪ್ರಚಾರಕ್ಕೆ ಕಾನೂನು ರೀತಿ ಉತ್ತರ ಕೊಡುತ್ತೇನೆ. ಬೇರೆಯವರ ಬಳಿ ಬ್ಲಾಕ್ಮೇಲ್ ಮಾಡಿ ಯಶಸ್ವಿ ಆಗಿರಬಹುದು. ಆದರೆ ನನ್ನ ಬಳಿ ಇವೆಲ್ಲಾ ನಡೆಯಲ್ಲ ಅಂತ ರೇವಣ್ಣ ಕಿಡಿ ಕಾರಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ವಿರುದ್ದ ವಾಗ್ದಾಳಿ ನಡೆಸಿದ ರೇವಣ್ಣ, ದೇವೇಗೌಡರನ್ನು ಎದುರಿಸಲಾಗದವರು ದೇವರಾಜೇಗೌಡನಂತಹವರನ್ನು ಬಿಡುತ್ತಾರೆ ಕಿಡಿ ಕಾರಿದ್ರು. ಇನ್ನು ನನ್ನ ವಿರುದ್ಧದ ಆರೋಪಗಳ ಬಗ್ಗೆ ತನಿಖೆಗೆ ಸಿದ್ಧನಿದ್ದೇನೆ. ನಾವು ಭ್ರಷ್ಟಾಚಾರ ಮಾಡಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ. ಅದೇನೋ ತೋರಿಸುವೆ ಅಂದಿದ್ದಾರಲ್ಲ ಅದನ್ನು ಅವರು ತೋರಿಸಲಿ. ಆಮೇಲೆ ನಾನೇನು ಎಂದು ತೋರಿಸುವೆ ಅಂತ ಸವಾಲು ಹಾಕಿದ್ದಾರೆ.
ಬಿಜೆಪಿ ವಿರುದ್ಧವೂ ರೇವಣ್ಣ ಕಿಡಿ-
ಇಂಥವರನ್ನು ಬಿಜೆಪಿಯವರು ಇಟ್ಟುಕೊಂಡಿದ್ದಾರೆ. ಬಿಜೆಪಿಗೆ ಇಂತಹ ಪರಿಸ್ಥಿತಿ ಬರಬಾರದಿತ್ತು, ಇಂಥವರನ್ನು ಇಟ್ಟುಕೋಬೇಕು ಅಂದರೆ ನಾನೇನು ಮಾಡಲು ಆಗಲ್ಲ. ಕೆಲ ಶಕ್ತಿಗಳು ಬ್ಲಾಕ್ ಮೇಲ್ ಮಾಡುವವರ ಜೊತೆ ಸೇರಿದ್ದಾರೆ. ಜನ ಹಾಗ ದೇವರು ನಮ್ಮ ಮುಗಿಸಬೇಕು ಬೇರೆಯವರು ಏನೂ ಮಾಡಲಾಗಲ್ಲ. ನಾನು ರಾಜಿಗೆ ಯಾರನ್ನೂ ಕಳಿಸುವುದಿಲ್ಲ, ಅದರ ಅಗತ್ಯ ನನಗಿಲ್ಲ ಅಂತ ರೇವಣ್ಣ ತಿಳಿಸಿದ್ರು.