ADVERTISEMENT
ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಅವರು ಹೇಳಿದ್ದಾರೆ.
ಈ ಮೂಲಕ ಹೊಸದಾಗಿ ರಚನೆಯಾಗಿರುವ ಇಂಡಿಯಾ ಮೈತ್ರಿಕೂಟದೊಳಗೆ ಮಾಯಾವತಿಯವರ ಪಕ್ಷವೂ ಸೇರ್ಪಡೆಯಾಗಲಿದೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ.
ಇವತ್ತು ತಮ್ಮ 68ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮಾಯಾವತಿ ಅವರು ರಾಜಕೀಯ ನಿವೃತ್ತಿ ಹೊಂದಲಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ನಿರಾಕರಿಸಿದ್ದಾರೆ.
ನಮ್ಮ ಅನುಭವದ ಪ್ರಕಾರ ಮೈತ್ರಿಯಿಂದ ನಮಗೆ ಲಾಭ ಆಗಿಲ್ಲ ಮತ್ತು ಮೈತ್ರಿಯಿಂದ ನಾವು ನಷ್ಟವನ್ನು ಅನುಭವಿಸಿದ್ದೇವೆ. ಈ ಕಾರಣಕ್ಕಾಗಿಯೇ ದೇಶದ ಹಲವಾರು ಪಕ್ಷಗಳು ಬಿಎಸ್ಪಿಯೊಂದಿಗೆ ಮೈತ್ರಿ ಬಯಸುತ್ತಿವೆ. ಚುನಾವಣೆಯ ಬಳಿಕ ಮೈತ್ರಿಯ ಬಗ್ಗೆ ಆಲೋಚನೆ ಮಾಡಬಹುದು. ಚುನಾವಣೆ ನಂತರ ಸಾಧ್ಯವಾದರೆ ಬಿಎಸ್ಪಿ ಬೆಂಬಲವನ್ನು ನೀಡಬಹುದು. ನಮ್ಮ ಪಕ್ಷ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ
ಎಂದು ಮಾಯಾವತಿ ಅವರು ಹೇಳಿದ್ದಾರೆ.
ADVERTISEMENT