ರಾಜ್ಯದಲ್ಲಿ ಇಂದು 7,589 ಜನರಿಗೆ ಕೊವಿಡ್ (Covid 19) ಟೆಸ್ಟ್ ಮಾಡಲಾಗಿದ್ದು, 87 ಕೊರೊನಾ (Corona) ಪ್ರಕರಣಗಳು ವರದಿಯಾಗಿವೆ.
ಇಂದು ಕೊರೊನಾಗೆ ಮೈಸೂರಿನಲ್ಲಿ ಓರ್ವ ಮೃತಪಟ್ಟಿದ್ದಾರೆ. ಒಟ್ಟಾರೆಯಾಗಿ 672 ಸಕ್ರಿಯ ಕೊರೊನಾ ಕೇಸ್ಗಳು ದಾಖಲಾಗಿದೆ. ಇನ್ನುಳಿದಂತೆ ಇಂದು ಕೋವಿಡ್-19 ರಿಂದ ಗುಣಮುಖರಾಗಿ 165 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 1.14%ಗೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು 38 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಅದೇ ರೀತಿ ಇಂದು ಮೈಸೂರಿನಲ್ಲಿ 1, ವಿಜಯನಗರ 3, ದಕ್ಷಿಣ ಕನ್ನಡ 3, ಶಿವಮೊಗ್ಗದಲ್ಲಿ 2, ಉತ್ತರ ಕನ್ನಡದಲ್ಲಿ 1 ಕೇಸ್ಗಳು ಪತ್ತೆಯಾಗಿದೆ.