ವಾರಾಣಸಿಯಲ್ಲಿರುವ ಗ್ಯಾನವ್ಯಾಪಿ ಮಸೀದಿಯಲ್ಲಿ ಮುಚ್ಚಲ್ಪಟ್ಟಿರುವ ನೆಲ ಮಹಡಿಯಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ವಾರಾಣಸಿ ನ್ಯಾಯಾಲಯ ಅನುಮತಿ ನೀಡಿದೆ.
ಹಿಂದೂಗಳಿಗೆ ಪೂಜೆ ಸಲ್ಲಿಸಲು ಏಳು ದಿನಗಳೊಳಗೆ ಅಗತ್ಯ ಸಿದ್ಧತೆ ಮಾಡುವಂತೆ ನ್ಯಾಯಾಲಯ ವಾರಾಣಸಿ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಜನವರಿ 24ರಂದು ಜಿಲ್ಲಾಡಳಿತ ಮಸೀದಿ ಸಂಕೀರ್ಣದ ದಕ್ಷಿಣ ಭಾಗವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು.
1993ವರೆಗೆ ಇಲ್ಲಿ ಪೂಜೆ ನಡೆಯುತ್ತಿತ್ತು. ಆದರೆ ರಾಜ್ಯ ಸರ್ಕಾರದ ಆದೇಶದ ಮೇರೆ ಆ ಪೂಜೆಯನ್ನು ನಿಲ್ಲಿಸಲಾಗಿತ್ತು.
ನೆಲಮಹಡಿಯಲ್ಲಿ ವ್ಯಾಸ ಕುಟುಂಬ ನೆಲೆಸಿತ್ತು. ಆ ಕುಟುಂದವರೇ ಇಲ್ಲಿ ಪೂಜೆಯನ್ನು ನೆರೆವೇರಿಸುತ್ತಿದ್ದರು.