ಲೋಕಸಭಾ ಚುನಾವಣೆ ಹತ್ತಿರ ಇರುವ ಬೆನ್ನಲ್ಲೇ ಘೋಷಣೆಯಾಗಿರುವ ಪ್ರಧಾನಿ ಮೋದಿ ಸರ್ಕಾರದ 10ನೇ ಬಜೆಟ್ನಲ್ಲಿ ಆದಾಯ ತೆರಿಗೆ ಬದಲಾವಣೆ ಆಗಿಲ್ಲ.
ಕಳೆದ ವರ್ಷ ಘೋಷಿಸಿದ್ದ ಆದಾಯ ತೆರಿಗೆಯನ್ನೇ ಮುಂದುವರೆಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ
ಕಳೆದ ವರ್ಷ ಘೋಷಣೆಯಾಗಿದ್ದ ಹೊಸ ಆದಾಯ ತೆರಿಗೆ ಪದ್ಧತಿ (2023-24ರಿಂದ ಜಾರಿ)ಯಲ್ಲಿ ತೆರಿಗೆ ಸ್ವರೂಪ ಕೆಳಗಿನಂತಿದೆ. ಹೊಸ ಆರ್ಥಿಕ ವರ್ಷದಲ್ಲೂ ಇದೇ ಮುಂದುವರೆಯಲಿದೆ.
0-3 ಲಕ್ಷ ರೂ. – ಆದಾಯ ತೆರಿಗೆ ಇಲ್ಲ
3 ಲಕ್ಷ ರೂ. – 6 ಲಕ್ಷ ರೂ. – ಶೇ.5
6 ಲಕ್ಷ ರೂ. – 9 ಲಕ್ಷ ರೂ. – ಶೇ.10
9 ಲಕ್ಷ ರೂ. – 12 ಲಕ್ಷ ರೂ. – ಶೇ.15
12 ಲಕ್ಷ ರೂ. – 15 ಲಕ್ಷ ರೂ. – ಶೇ.20
15 ಲಕ್ಷ ರೂ. ಮೇಲ್ಪಟ್ಟು – ಶೇ.30