ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ 11 ರೀತಿಯ ವಿವಿಧ ಯೋಜನೆಗಳ ಮೂಲಕ ನೆರವನ್ನು ನೀಡುತ್ತಿದೆ. ಹಾಗಾದ್ರೆ ಕಟ್ಟಡ ಕಾರ್ಮಿಕರು ಮತ್ತು ನಿರ್ಮಾಣ ಕಾರ್ಮಿಕರು ಈ ಯೋಜನೆಗಳ ಲಾಭವನ್ನು, ಅನುಕೂಲವನ್ನು ಪಡೆದುಕೊಳ್ಳುವುದು ಹೇಗೆ..? ಕಟ್ಟಡ ಕಾರ್ಮಿಕರಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ..?
ಕಟ್ಟಡ ಕಾರ್ಮಿಕರು ಮತ್ತು ನಿರ್ಮಾಣ ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.
ನೋಂದಣಿ ಮಾಡಿಕೊಳ್ಳಲು ಬೇಕಾದ ದಾಖಲೆಗಳು:
1. ಉದ್ಯೋಗ ದೃಡೀಕರಣಪತ್ರ
2. ಆಧಾರ್ ಕಾರ್ಡ್
4. ರೇಷನ್ ಕಾರ್ಡ್ (ಕಡ್ಡಾಯವಲ್ಲ)
5. ವಯಸ್ಸಿನ ದೃಡೀಕರಣಪತ್ರ (ಆಧಾರ್ ಇತ್ಯಾದಿ)
ಅರ್ಜಿ ಸಲ್ಲಿಸುವುದು ಹೇಗೆ..?
ಸೇವಾ ಸಿಂಧು ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಯಾವುದೇ ಸೇವಾ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸಿದ ಬಳಿಕ ನೋಂದಣಾಧಿಕಾರಿಗಳಾದ ಹಿರಿಯ / ಕಾರ್ಮಿಕ ನಿರೀಕ್ಷಕರು ಪರಿಶೀಲನೆ ಮಾಡಿ ಅನುಮೋದನೆಯನ್ನು ನೀಡುತ್ತಾರೆ. ಅರ್ಜಿ ಸಲ್ಲಿಸಿದ 45 ದಿನಗಳ ಒಳಗಾಗಿ ಕಟ್ಟಡ ಕಾರ್ಮಿಕರ ಕಾರ್ಡ್ ವಿತರಣೆ ಆಗುತ್ತದೆ.
ಈಗಾಗಲೇ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈಗಿರುವ ನೋಂದಣಿಯನ್ನೇ ಮುಂದುವರೆಸಬಹುದು.
ಅದಕ್ಕಾಗಿ ಅರ್ಹ ಫಲಾನುಭವಿಗಳು ಉದ್ಯೋಗ ಪ್ರಮಾಣ ಪತ್ರದ ಜೊತೆಗೆ ವರ್ಷದಲ್ಲಿ 90 ದಿನಗಳ ಹೆಚ್ಚಿಗೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿದ ಸಾಕ್ಷಿಗಾಗಿ ನಿಯೋಜಕರಿಂದ ಪಡೆದ ವೇತನ ಚೀಟಿ ಅಥವಾ ಹಾಜರಾತಿ ಪ್ರತಿಯನ್ನು ಲಗತ್ತಿಸಿ ಈಗಿರುವ ನೋಂದಣಿಯನ್ನು ನವೀಕರಿಸಿಕೊಳ್ಳಬಹುದು.