ಕೇಂದ್ರ ಸರ್ಕಾರ 28 ರಾಜ್ಯಗಳಿಗೆ ತೆರಿಗೆ ಹಂಚಿಕೆ ಮೂರನೇ ಕಂತನ್ನು ಬಿಡುಗಡೆ ಮಾಡಿದ್ದು ಮೂರನೇ ಕಂತಿನಲ್ಲೂ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗಿದೆ. ಜಿಎಸ್ಟಿ ತೆರಿಗೆ ಮತ್ತು ಆದಾಯ ತೆರಿಗೆ ಪಾವತಿಯಲ್ಲಿ ಮುಂಚೂಣಿಯಲ್ಲಿದ್ದರೂ ನಮ್ಮ ರಾಜ್ಯಕ್ಕೆ ಉಳಿದೆಲ್ಲ ರಾಜ್ಯಗಳಿಗಿಂತ ಅತ್ಯಂತ ಕಡಿಮೆ ತೆರಿಗೆ ಪಾಲು ಹಂಚಿಕೆಯಾಗಿದೆ.
ಮೂರನೇ ಕಂತಿನಲ್ಲಿ 1 ಲಕ್ಷದ 42 ಸಾವಿರ ಕೋಟಿ ರೂಪಾಯಿ ತೆರಿಗೆ ಪಾಲನ್ನು ಹಂಚಿಕೆ ಮಾಡಲಾಗಿದೆ. ಫೆಬ್ರವರಿ 12ರಂದು 71,061 ಕೋಟಿ ರೂಪಾಯಿ ಮೊತ್ತದ ತೆರಿಗೆ ಪಾಲನ್ನು ಹಂಚಿಕೆ ಮಾಡಲಾಗಿತ್ತು.
ಸಾಮಾಜಿಕ ಕಲ್ಯಾಣ ಯೋಜನೆಗಳಿಗಾಗಿ ಮತ್ತು ಅಭಿವೃದ್ಧಿ ಕೆಲಸಗಳಿಗಾಗಿ ರಾಜ್ಯಗಳ ಕೈಯನ್ನು ಬಲಪಡಿಸಲು ಈ ತೆರಿಗೆ ಪಾಲನ್ನು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.
ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಪಾಲು..? (ಕೋಟಿ ರೂಪಾಯಿ ಲೆಕ್ಕಾಚಾರದಲ್ಲಿ)
ಆಂಧ್ರಪ್ರದೇಶ – 5,752
ಅರುಣಾಚಲಪ್ರದೇಶ – 2,497
ಅಸ್ಸಾಂ – 4,446
ಬಿಹಾರ – 14,295
ಛತ್ತೀಸ್ಗಢ – 4,842
ಗೋವಾ – 549
ಗುಜರಾತ್ – 4,943
ಹರಿಯಾಣ – 1,553
ಹಿಮಾಚಲಪ್ರದೇಶ -1,180
ಜಾರ್ಖಂಡ್ – 4,700
ಕರ್ನಾಟಕ – 5,183
ಕೇರಳ – 2,736
ಮಧ್ಯಪ್ರದೇಶ – 11,157
ಮಹಾರಾಷ್ಟ್ರ – 8,978
ಮಣಿಪುರ – 1,018
ಮೇಘಾಲಯ – 1,090
ಮಿಜೋರಾಂ – 809
ಒಡಿಶಾ – 6,435
ಪಂಜಾಬ್ – 2,568
ರಾಜಸ್ಥಾನ -8,564
ಸಿಕ್ಕಿಂ -551
ತಮಿಳುನಾಡು – 5,797
ತೆಲಂಗಾಣ – 2,987
ತ್ರಿಪುರ – 1,006
ಉತ್ತರಪ್ರದೇಶ – 25,495
ಉತ್ತರಾಖಂಡ್ – 1,589
ಪಶ್ಚಿಮ ಬಂಗಾಳ – 10,692
ದಕ್ಷಿಣ ಭಾರತದ ರಾಜ್ಯಗಳಿಗೆ ಅತ್ಯಂತ ಕಡಿಮೆ ತೆರಿಗೆ ಪಾಲು ಪಡೆದಿರುವ ರಾಜ್ಯ ಕರ್ನಾಟಕ (ಕೇರಳ ಮತ್ತು ತೆಲಂಗಾಣಕ್ಕೆ ಕರ್ನಾಟಕಕ್ಕೆ ಹೋಲಿಸಿದರೆ ಪುಟ್ಟ ರಾಜ್ಯಗಳು).
ಇನ್ನು ಉತ್ತರಪ್ರದೇಶ ಈ ಬಾರಿಯೂ ಕರ್ನಾಟಕ ಪಡೆದ ತೆರಿಗೆ ಪಾಲಿನ 4.92ರಷ್ಟು ಹೆಚ್ಚು ತೆರಿಗೆ ಪಾಲನ್ನು ಪಡೆದಿದೆ. ಬಿಹಾರ, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳಕ್ಕೆ ಕರ್ನಾಟಕಕ್ಕೆ ಸಿಕ್ಕಿರುವ ತೆರಿಗೆ ಪಾಲಿನ 2ರಿಂದ 3 ಪಟ್ಟು ಹೆಚ್ಚು ತೆರಿಗೆ ಪಾಲನ್ನು ಕೊಡಲಾಗಿದೆ.