ಉಡುಪಿ-ಚಿಕ್ಕಮಗಳೂರು ಜನರಿಂದ ತಿರಸ್ಕಾರಕ್ಕೆ ಒಳಗಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಬೆಂಗಳೂರಿನ ಜನ ಒಪ್ಪಿಕೊಳ್ಳಲು ಮೂರ್ಖರಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
2014ರ ಮಾರ್ಚ್ 26ರಂದು ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಆರೋಪಿಯನ್ನಾಗಿ ಹೆಸರಿಸಿದೆ. ಈ ಪ್ರಕರಣದ ವಿಚಾರಣೆ ಸಂಬಂಧ ಇವತ್ತು ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರ ಎದುರು ಹಾಜರಾಗಬೇಕಿದೆ.
ಈ ಪ್ರಕರಣವನ್ನೇ ಉಲ್ಲೇಖಿಸಿರುವ ಕಾಂಗ್ರೆಸ್
ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ @ShobhaBJP ಅವರನ್ನು ಬಿಜೆಪಿಯಲ್ಲಿರುವ BSY ವಿರೋಧಿ ಬಣವೇ ಮುಳುಗಿಸುವುದಕ್ಕೆ ಹೊಂಚು ಹಾಕಿದೆ.!
ಬಾಯಿ ಹರುಕರು, ಕೆಲಸಕ್ಕೆ ಬಾರದವರು, ಭ್ರಷ್ಟರನ್ನು ಬೆಂಗಳೂರು ಉತ್ತರ ಕ್ಷೇತ್ರದ ಮತದಾರರು ತಿರಸ್ಕರಿಸುವುದು ನಿಶ್ಚಿತ.
ಉಡುಪಿ ಚಿಕ್ಕಮಗಳೂರಿನಲ್ಲಿ ತಿರಸ್ಕಾರಕ್ಕೊಳಪಟ್ಟವರನ್ನು ಒಪ್ಪಿಕೊಳ್ಳಲು ಬೆಂಗಳೂರಿನ ಜನ ಮೂರ್ಖರಲ್ಲ.
ಎಂದು ಟ್ವೀಟಿಸಿದೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ರಾಜೀವ್ ಗೌಡ ಅವರಿಗೆ ಟಿಕೆಟ್ ನೀಡಿದೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿದ್ದ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡರಿಗೆ ಟಿಕೆಟ್ ತಪ್ಪಿಸಿ ಕರಂದ್ಲಾಜೆಗೆ ಬಿಜೆಪಿ ಟಿಕೆಟ್ ನೀಡಿದೆ.