ಕರ್ನಾಟಕದಲ್ಲಿ 24 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿರುವ ಕಾಂಗ್ರೆಸ್ ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಾಮರಾಜನಗರ ಕ್ಷೇತ್ರಗಳಿಗೆ ಇನ್ನೂ ಟಿಕೆಟ್ ಘೋಷಣೆ ಮಾಡಿಲ್ಲ.
ಈ ನಡುವೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಮತ್ತೆ ಟಿಕೆಟ್ ಬಯಸಿ ತಮ್ಮ ಲಾಬಿ ತೀವ್ರಗೊಳಿಸಿದ್ದಾರೆ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ. ಈ ಬಾರಿ ತಮಗೆ ಟಿಕೆಟ್ ನೀಡಬೇಕು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮೂಲಕ ಒತ್ತಡ ಹಾಕುತ್ತಿದ್ದಾರೆ.
ತಮಗೆ ಟಿಕೆಟ್ ಸಿಗಬಹುದು ಎಂಬ ಖಾತ್ರಿಯಲ್ಲಿರುವ ಮಾಜಿ ಸಚಿವ ಎಂ ಆರ್ ಸೀತಾರಾಂ ಅವರ ಮಗ ಮತ್ತು ಕರ್ನಾಟಕ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ಪರೋಕ್ಷವಾಗಿ ವೀರಪ್ಪ ಮೊಯ್ಲಿಗೆ ಟ್ವೀಟಿಸಿದ್ದಾರೆ.
ಎರಡು ನಮೂನೆಯ ವ್ಯಕ್ತಿಗಳಿರುತ್ತಾರೆ: ಕೆಲಸ ಮಾಡುವವರು ಮತ್ತು ಕ್ರೆಡಿಟ್ ತಗೊಳ್ಳುವವರು. ನಾನು ಮೊದಲನೇ ಗುಂಪಿನಲ್ಲಿ ಪ್ರಯತ್ನಿಸುವಂತೆ ಹೇಳಿದರು, ಅಲ್ಲಿ ಸ್ಪರ್ಧೆ ಇರಲ್ಲ – ಇಂದಿರಾ ಗಾಂಧಿಜೀ.