ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ ಅವರ ಮಗ ಸುನಿಲ್ ಬೋಸ್ ಅವರಿಗೆ ಟಿಕೆಟ್ ನೀಡಲಾಗಿದೆ.
ಚಾಮರಾಜನಗರ ಕ್ಷೇತ್ರಕ್ಕೆ ಸುನೀಲ್ ಬೋಸ್ ಅವರು ಅಭ್ಯರ್ಥಿ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ 3ರಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಎಂ ಲಕ್ಷ್ಮಣ್ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸುನಿಲ್ ಬೋಸ್ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಮೂಲಕ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ
1. ಮೃಣಾಲ್ ಹೆಬ್ಬಾಳ್ಕರ್ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಗ – ಬೆಳಗಾವಿ ಲೋಕಸಭಾ ಕ್ಷೇತ್ರ
2. ಪ್ರಿಯಾಂಕ ಜಾರಕಿಹೊಳಿ – ಸಚಿವ ಸತೀಶ್ ಜಾರಕಿಹೊಳಿ ಮಗಳು – ಚಿಕ್ಕೋಡಿ ಲೋಕಸಭಾ ಕ್ಷೇತ್ರ
3. ಸಂಯುಕ್ತ ಪಾಟೀಲ್ – ಸಚಿವ ಶಿವಾನಂದ ಪಾಟೀಲ್ ಮಗಳು – ಬಾಗಲಕೋಟೆ ಲೋಕಸಭಾ ಕ್ಷೇತ್ರ
4. ಪ್ರಭಾ ಮಲ್ಲಿಕಾರ್ಜುನ್ – ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪತ್ನಿ – ದಾವಣಗೆರೆ ಲೋಕಸಭಾ ಕ್ಷೇತ್ರ
5. ಸೌಮ್ಯ ರೆಡ್ಡಿ – ಸಚಿವ ರಾಮಲಿಂಗಾ ರೆಡ್ಡಿ ಮಗಳು – ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ
6. ಸಾಗರ್ ಖಂಡ್ರೆ – ಸಚಿವ ಈಶ್ವರ ಖಂಡ್ರೆ ಮಗ – ಬೀದರ್ ಲೋಕಸಭಾ ಕ್ಷೇತ್ರ
7. ರಾಧಾಕೃಷ್ಣ ದೊಡ್ಡಮನಿ – ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ – ಕಲಬುರಗಿ ಲೋಕಸಭಾ ಕ್ಷೇತ್ರ
8. ಮನ್ಸೂರು ಖಾನ್ – ರಾಜ್ಯಸಭೆಯ ಮಾಜಿ ಸಂಸದ ಕೆ ರೆಹಮಾನ್ ಖಾನ್ ಮಗ – ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ